ಹಿರಿಯರು ಮುತ್ತು-ರತ್ನದಂತೆ: ಬಸವಶಾಸ್ತ್ರಿ
ಗದಗ: ಹಿರಿಯ ನಾಗರಿಕರು ಮುತ್ತು-ರತ್ನಗಳಿದ್ದಂತೆ. ಇಂದು ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮವು ಇಂದಿನ ನವ ಯುವಕರಿಗೆ ಮಾರ್ಗದರ್ಶಕವಾಗಿದೆ ಎಂದು ಬಸವಶಾಸ್ತ್ರೀಗಳು ಹೇಳಿದರು. ನಗರದಲ್ಲಿರುವ ಪ್ರೊಬಸ್ ಕ್ಲಬ್ ಗದಗ-ಬೆಟಗೇರಿಯ 22ನೇ ಪಾಕ್ಷಿಕ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಜಾಪಿತ ಬ್ರಹ್ಮಕುಮಾರಿಯ ಬಿ.ಕೆ. ಸ್ವಾತಿ ಮಾತನಾಡಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಎಲ್ಲರೂ ಮಾನಸಿಕ ಒತ್ತಡದಲ್ಲಿದ್ದಾರೆ. ಆದರೆ ತಾವು ಹಿರಿಯರು ಅಧ್ಯಾತ್ಮಿಕ ಚಿಂತನೆ ಕಡೆಗೆ ಹೆಚ್ಚಿನ ಗಮನಹರಿಸುವುದು ಅವಶ್ಯವಾಗಿದೆ ಎಂದರು. ಸಿಂಧನೂರಿನ ಬಿಆರ್ಸಿ ಸಂಪನ್ಮೂಲ ವ್ಯಕ್ತಿ ಆದೇಶ ಹೆಂಬಾರ, ಸಾನ್ನಿಧ್ಯ ವಹಿಸಿದ್ದ ಬಸವ ಶಾಸ್ತ್ರೀಗಳು, ದಾಸೋಹ ಸೇವೆ ಸಲ್ಲಿಸಿದ ವಿ.ಬಿ. ಹುಬ್ಬಳ್ಳಿ, ವಿನೋದ ತುಂಬಳ ದಂಪತಿ ಹಾಗೂ ಎಸ್.ಎ. ದಂಡಿನ ದಂಪತಿ ಸನ್ಮಾನಿಸಲಾಯಿತು.