ತಂತ್ರಜ್ಞಾನದೊಂದಿಗೆ ಪಾಠ ಬೋಧಿಸಿ: ರಡ್ಡೇರ
ಮುಂಡರಗಿ: ಸಮಾಜ ವಿಜ್ಞಾನ ವಿಷಯ ಬೋಧಿಸುವ ಶಿಕ್ಷಕರು ತಮ್ಮ ಬೋಧನೆಯಲ್ಲಿ ಆಧುನಿಕ ತಂತ್ರಜ್ಞಾನಗಳೊಂದಿಗೆ ಪಾಠ ಮಾಡಲು ಮುಂದಾಗಬೇಕೆಂದು ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಹೇಳಿದರು.
ಅವರು ತಾಲೂಕಿನ ಮೇವುಂಡಿ ಗ್ರಾಮದ ಶಾಂತಾಬಾಯಿ ಮಲ್ಲಪ್ಪ ಕೊರ್ಲಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಗದಗ ಜಿಲ್ಲಾ ಸಮಾಜ ವಿಜ್ಞಾನ ಬೋಧಿಸುವ ಪ್ರೌಢ ಶಾಲಾ ಶಿಕ್ಷಕರಿಗಾಗಿ 10ನೇ ತರಗತಿಯ ಸಮಾಜ ವಿಜ್ಞಾನ ನೂತನ ಪಠ್ಯ ವಿಷಯದ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ವಿಷಯ ಪರಿವೀಕ್ಷಕ ಸಿ.ಬಿ. ಕಾಳೆ, ಮೇವುಂಡಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆ ಗದಗ ಜಿಲ್ಲಾ ಸಮಾಜ ವಿಜ್ಞಾನ ಬೋಧಿಸುವ ಪ್ರೌಢ ಶಾಲಾ ಶಿಕ್ಷಕರಿಗಾಗಿ 10ನೇ ತರಗತಿಯ ಸಮಾಜ ವಿಜ್ಞಾನ ನೂತನ ಪಠ್ಯ ವಿಷಯದ ತರಬೇತಿ ಕಾರ್ಯಾಗಾರವನ್ನು ಉಚಿತವಾಗಿ, ಅಚ್ಚುಕಟ್ಟಾಗಿ ನಡೆಸಿಕೊಟ್ಟಿರುವುದು ಅಭಿನಂದನಾರ್ಹ. ರಾಜ್ಯದಲ್ಲಿಯೇ ಗುಣಾತ್ಮಕ ಶಿಕ್ಷಣ ನೀಡುವ ಸುಂದರ ಪರಿಸರ ಹೊಂದಿರುವ ಮಾದರಿ ಶಾಲೆ ಇದಾಗಿದೆ ಎಂದರು.
ಮುಖ್ಯೋಪಾಧ್ಯಾಯ ಶರಣು ಗೋಗೇರಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎನ್. ಆದಿ, ಯು.ಎಂ. ಹಾದಿಮನಿ, ಸುಧಾ ಬನ್ನಿಕಲ್, ಸಿ.ಐ. ಹೊಸಮನಿ, ಎಂ.ಎಸ್. ಅಸುಂಡಿ, ಎಸ್.ಆರ್. ಹನುಮಗೌಡರ, ಸಿ.ಬಿ. ಮುಧೋಳಮಠ, ಮಾಳಗಿ ಮಾತನಾಡಿದರು. ಎಸ್.ಡಿ. ಚಿಗರಿ, ಎನ್.ಎಂ. ಚಿತ್ರಗಾರ್, ಎ.ಬಿ. ರಂಗರೇಜಿ ಮೊದಲಾದವರು ಇದ್ದರು. ಗೀತಾ ಪಾಟೀಲ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪಿ.ಆರ್. ನಡುವಿನಹಳಿ ಸ್ವಾಗತಿಸಿದರು. ವಿ.ಎನ್. ಅಮಾತಿಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಬಿ. ಬೆನಕನವಾರಿ ನಿರೂಪಿಸಿದರು. ಎಲ್.ಎಚ್. ಯಣ್ಣಿ ವಂದಿಸಿದರು.