ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸವಿತಾ ಸಮಾಜಕ್ಕೆ ರು. 1 ಲಕ್ಷ ಸಾಲ: ಸ್ವಾಗತ

Lingaraj Badiger
Updated On : 23 Jun 2014, 10:42 am

ಗದಗ: ಸವರ್ಣೀಯರ ತಿರಸ್ಕಾರಕ್ಕೆ ಒಳಗಾಗಿರುವ ಬಳ್ಳಾರಿ ಜಿಲ್ಲೆ ಶಿರಗುಪ್ಪ ತಾಲೂಕಿನ ತಾಳೂರು ಗ್ರಾಮದ ಸವಿತಾ ಸಮಾಜದ 7 ಮಂದಿಗೆ ಜೀವನೋಪಾಯಕ್ಕೆ ಹಾಗೂ ಇತರೆ ವೃತ್ತಿ ನಿರ್ವಹಣೆಗೆ ಅನುಕೂವಾಗಲು ಸರ್ಕಾರ ರು. 1 ಲಕ್ಷ ಸಾಲ ನೀಡುವ ಮೂಲಕ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರು ಅನುಕಂಪ ತೋರಿದ ಕ್ರಮಕ್ಕೆ ಸ್ವಾಗತಾರ್ಹ ಎಂದು ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಕೃಷ್ಣಾ ಹಡಪದ ಹೇಳಿದರು.
ಗದಗ ಜಿಲ್ಲಾ ಕ್ಷೌರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಈಚೆಗೆ ಹಮ್ಮಿಕೊಂಡ ಎಲ್ಲರಂತೆ ಕ್ಷೌರಿಕರನ್ನು ಬದುಕಲು ಬಿಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗದಗಿನಲ್ಲಿ ಕೂಡ ಕ್ಷೌರಿಕ ವೃತ್ತಿ ನಿರ್ವಹಣೆಗೆ ಅನುಕೂಲವಾಗಲು ಸಮಾಜ ಮುಖಂಡ ರಾಮಣ್ಣ ರಾಂಪುರ ಅವರ ಮುಂದಾಳತ್ವದಲ್ಲಿ ಗದಗ ಸವಿತಾ ಸಮಾಜದ 25 ಮಂದಿಗೆ ತಲಾ ರು. 30 ಸಾವಿರ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ನೀಡಲು ಶಾಸಕರು ಹಾಗೂ ಸಚಿವ ಎಚ್.ಕೆ. ಪಾಟೀಲರು ಆದೇಶ ನೀಡಿದ ಕ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.
ಹನುಮಂತಪ್ಪ ರಾಂಪುರ, ಪರಶುರಾಮ ಕೊಟೆಕಲ್ಲ, ಸಂತ ಸೇನಾ ಮಹಾರಾಜ ನಾಭಿಕ ಮರಾಠ (ಸವಿತಾ) ಸಮಾಜದ ಅಧ್ಯಕ್ಷ ರಾಜು ಮಾನೆ, ವೆಂಕಟೆಶ ಬಾಯಲಗುಡ್ಡ, ಬಾಲರಾಜ ಕೊಟೆಕಲ್ಲ, ಪಾಂಡು ಕಾಳೆ, ಪರಶುರಾಮ ರಾಂಪುರ, ಮುರಳಿ ವಲ್ಲೂರ, ರಾಮಣ್ಣ ಗುರುಜಾಲಕರ, ಜಂಭಣ್ಣ ಕಡಮೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಕುಮಾರ ಹಡಪದ ಸ್ವಾಗತಿಸಿದರು. ಎಲ್ಲಪ್ಪ ರಾಂಪುರ ನಿರೂಪಿಸಿದರು. ಶ್ರೀನಿವಾಸ ಶಿಕಾರಿಪುರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement