ಬೇವಿನಮರ ಬಿದ್ದು ಟಿಸಿ ಜಖಂ
ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಕೇರಿಯ ಭೋವಿ ಓಣಿಯಲ್ಲಿ ಮಂಗಳವಾರ ಬೆಳಗ್ಗೆ ಬೃಹತ್ ಬೇವಿನಮರ ಆಕಸ್ಮಿಕವಾಗಿ ಮುರಿದು ಬಿದ್ದ ಪರಿಣಾಮ ವಿದ್ಯುತ್ ಪರಿವರ್ತಕ ಜಖಂಗೊಂಡಿದ್ದು, 5 ವಿದ್ಯುತ್ ಕಂಬಗಳು ಮುರಿದಿರುವ ಘಟನೆ ಜರುಗಿದೆ. ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಪಟ್ಟಣದ ಬಸ್ತಿಕೇರಿಯ ಭೋವಿ ಓಣಿಯಲ್ಲಿ ಬೃಹತ್ತಾದ ಹಳೆಯ ಬೇವಿನಮರವು ಮಂಗಳವಾರ ಬೆಳಗ್ಗೆ ಆಕಸ್ಮಿಕವಾಗಿ ಮುರಿದು ವಿದ್ಯುತ್ ಸಂಪರ್ಕ ಇರುವ ತಂತಿ ಮೇಲೆ ಬಿದ್ದ ಪರಿಣಾಮವಾಗಿ ಒಂದು ವಿದ್ಯುತ್ ಪರಿವರ್ತಕವು ಜಖಂಗೊಂಡು, 5 ವಿದ್ಯುತ್ ಕಂಬಗಳು ಮುರಿದಿವೆ.
ಮರ ಬಿದ್ದ ಸ್ಥಳದ ಮುಂದೆ ಅಂಗನವಾಡಿ ಕೇಂದ್ರವಿದ್ದು, ಜನ ಸಂಚಾರವಿರುವ ರಸ್ತೆ ಮೇಲೆ ಮರ ಬಿದ್ದಿದೆ ಮರ ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಆ ಮಾರ್ಗದಲ್ಲಿ ಹರಿಯುತ್ತಿರುವ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದರು. ನಂತರ ವಿದ್ಯುತ್ ಕಂಬ ದುರಸ್ತಿ ಕಾರ್ಯ ಕೈಗೊಂಡರು.
--