ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಎಲ್ಲರೂ ಪರಿಸರ ಉಳಿಸಿ

Lingaraj Badiger
Updated On : 26 Jun 2014, 10:54 am

ನರಗುಂದ: ಪ್ರಪಂಚದಲ್ಲಿ ಪ್ರತಿದಿನ ಸಾಕಷ್ಟು ಪರಿಸರ ನಾಶವಾಗುತ್ತಿರುವುದರಿಂದ ದಿನದಿಂದ ದಿನಕ್ಕೆ ತಾಪಮಾನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇದು ಆತಂಕಕಾರಿಯಾಗಿದ್ದು, ಹಾಗಾಗಿ ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಿಸುವ ಹಾಗೂ ಬೆಳೆಸುವ ಪ್ರವೃತ್ತಿ ಮೂಡಲಿ ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಪ್ರಭಾ ಹೇಳಿದರು. ಪಟ್ಟಣದ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕೆ ಪರಿಸರ ನಾಶ ಮಾಡುತ್ತಿದ್ದಾನೆ. ಇದರಿಂದ ತಾಪಮಾನದಲ್ಲಿ ಏರುಪೇರುಗಳನ್ನು ಕಾಣುತ್ತಿದ್ದೇವೆ. ನಾವು ಮುಂದಿನ ದಿನಗಳಲ್ಲಿ ಇದೇ ರೀತಿ ಪರಿಸರ ಬಗ್ಗೆ ನಿರ್ಲಕ್ಷ್ಯ ಮಾಡುತ್ತ ಹೋದಲ್ಲಿ ತಾಪಮಾನದಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೇವಲ ಸರ್ಕಾರವಷ್ಟೇ ಪರಿಸರ ಬಗ್ಗೆ ಕಾಳಜಿ ವಹಿಸಿದರೆ ಸಾಲದು ನಾಡಿನ ಎಲ್ಲ ಜನತೆ ಸಹಕಾರ ನೀಡಿದಲ್ಲಿ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದರು. ಪುರಸಭೆ ಉಪಾಧ್ಯಕ್ಷ ಕಿರಣ ಮುಧೋಳೆ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಜ್ಯೋತಿ ಪತ್ರಿ, ನೀಲಾಂಬಿಕಾ ಸುರೇಬಾನ, ಬಿ.ಆರ್. ವಗ್ಗರ, ಎಸ್.ಎಂ. ಹಿರೇಮಠ, ಶಿವಲೀಲಾ ಕೊಳ್ಳಿಯವರ, ಲಕ್ಷ್ಮೀ ಅರಳಿಮಠ, ಸುಮಂಗಲ ಸವದತ್ತಿ, ಎಂ.ಕೆ. ನಲೆಗುಡ್ಡ, ಎಂ.ಆರ್. ಮಡಿವಾಳರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement