ಸಂಕನೂರ ಗೆಲವು: ಕಾರ್ಯಕರ್ತರ ಸಂಭ್ರಮ
ಮುಂಡರಗಿ: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಾ. ಎಸ್.ವಿ. ಸಂಕನೂರ ಅಧಿಕ ಮತಗಳಿಂದ ಜಯಗಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಮುಂಡರಗಿ ಪಟ್ಟಣದ ಕೊಪ್ಪಳ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಮಂಜುನಾಥ ಇಟಗಿ ಮಾತನಾಡಿ, ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಆಶೀರ್ವದಿಸಿದಂತೆ ಇದೀಗ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿಯೂ ಪ್ರಜ್ಞಾವಂತ ಮತದಾರರು ನಮ್ಮ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತದ ಮತ ನೀಡುವ ಮೂಲಕ ಆಯ್ಕೆ ಮಾಡಿ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಿದ್ದಾರೆ ಎಂದರು. ರಜನೀಕಾಂತ ದೇಸಾಯಿ, ಶಿವನಗೌಡ ಗೌಡ್ರ, ಪ್ರಭು ಅಬ್ಬೀಗೇರಿ, ಶ್ರೀನಿವಾಸ ಅಬ್ಬೀಗೇರಿ, ಮೋಹನ್ ದೇಸಾಯಿ, ಶಂಕರಗೌಡ ಪಾಟೀಲ, ಪರಶುರಾಮ ಕರಡಿಕೊಳ್ಳ, ಸುರೇಶ ಮಾಳೆಕೊಪ್ಪ, ಬಸವರಾಜ ಸಸಿಮಠ, ದೇವಪ್ಪ ಇಟಗಿ, ಸೋಮಣ್ಣ ಹಂಚಿನಾಳ, ಚಂದ್ರಕಾಂತ ಮಟ್ಟಿ, ಟಿ.ಡಿ. ದಂಡೀನ, ಅಂದಪ್ಪ ಉಳ್ಳಾಗಡ್ಡಿ, ಅಂದಪ್ಪ ಕುರಿಡಗಿ, ಆನಂದ ಬನ್ನಿಕೊಪ್ಪ, ಶಿವು ನಾಡಗೌಡ್ರ, ರವೀಂದ್ರಗೌಡ ಪಾಟೀಲ, ಮಹಾದೇವಪ್ಪ ಬಳ್ಳಾರಿ, ಚಿನ್ನಪ್ಪ ವಡ್ಡಟ್ಟಿ, ಬಿ.ಕೆ. ಪಾಟೀಲ, ಶಿವಪ್ಪ ಚಿಕ್ಕನ್ನವರ, ಎಸ್.ವಿ. ಕಣವಿಮಠ, ಬಸವರಾಜ ಮುಂಡವಾಡ, ರುದ್ರಪ್ಪ ಲದ್ದಿ, ನಾಗರಾಜ ಕೋಳಿಯವರ, ಮಂಜುನಾಥ ಮುಧೋಳ, ರಾಮು ಡೋಣ್ಣಿ ಪಾಲ್ಗೊಂಡಿದ್ದರು.