ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾವಯವ ಕೃಷಿಗೆ ಮಹತ್ವ ನೀಡಿ: ಬಾಲರಡ್ಡಿ

Lingaraj Badiger
Updated On : 26 Jun 2014, 10:58 am

ಕನ್ನಡಪ್ರಭ ವಾರ್ತೆ, ಗದಗ, ಜೂ. 25
ಇಂದಿನ ದಿನಮಾನಗಳಲ್ಲಿ ರೈತರು ಸಾವಯವ ಕೃಷಿ ಪದ್ಧತಿಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಸಿ.ಬಿ. ಬಾಲರಡ್ಡಿ ಹೇಳಿದರು.
ಸೋಮವಾರ ನಗರದ ಎಪಿಎಂಸಿಯಲ್ಲಿರುವ ಅರ್ಗ್ಯಾನಿಕ್ ಫಾರ್ಮ್ ಪ್ರೋಡ್ಯುಜರ್ಸ್ ಅಸೋಶಿಯೇಷನ್ ವತಿಯಿಂದ ಸಾವಯವ ದೃಢೀಕರಣ ಹೊಂದಿದ ರೈತರಿಗೆ ಸರ್ಜಿಕಲ್ ಕಾಟನ್ ಹತ್ತಿ ಬೀಜಗಳನ್ನು ಉಚಿತವಾಗಿ ವಿತರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈ ಅಸೋಶಿಯೇಷನ್ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳಸಲು ನೂತನ ಹೆಜ್ಜೆ ಇಟ್ಟಿದ್ದು ಇದು ಯಶಸ್ವಿಯಾಗಲಿ. ರೈತರು ಹೊಸ ಹೊಸ ಕ್ರಮಗಳನ್ನು ಕೈಗೊಂಡು ಆರ್ಥಿಕವಾಗಿ ಸಬಲರಾಗುವ ನಿಟ್ಟಿನಲ್ಲಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಹತ್ತಿ ಬೆಳೆ ಬೆಳೆಯುವುದು ತುಂಬಾ ಸುಲಭವಾಗಿದ್ದು, ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಅತಿ ಶ್ರಮವಹಿಸಿದಾಗ ಉತ್ತಮ ಫಸಲು ಬರಲು ಸಾಧ್ಯ. ಜಿಲ್ಲೆಯಲ್ಲಿ ಮಳೆಯ ಅಭಾವದಿಂದಾಗಿ ಇನ್ನೂ ಬಿತ್ತನೆ ಕಾರ್ಯ ಪೂರ್ಣವಾಗಿಲ್ಲ ಮಳೆಯ ನಿರೀಕ್ಷೆಯಲ್ಲಿದ್ದಾರೆ ಎಂದರು.
ಜಂಟಿ ನಿರ್ದೇಶಕರ ಕೇಂದ್ರ ಸ್ಥಾನದ ಅಧಿಕಾರಿ ಪ್ರಹ್ಲಾದ್ ರಾವ್ ಮಾತನಾಡಿ, ರೈತರು ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸಿ, ಸೂಕ್ತ ಮಾಹಿತಿಯನ್ನು ಪಡೆದು ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು. ಕೃಷಿ ಮೂಲ ಉದ್ಯೋಗವಾಗಿದ್ದು, ಇದನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಜನಾಂಗಕ್ಕೆ ನೀಡಬೇಕಾಗಿದೆ ಎಂದರು.
ಸಂಸ್ಥೆ ಅಧ್ಯಕ್ಷ ಸಿ.ಆರ್. ಬೂದಿಹಾಳ, ಕಾರ್ಯದರ್ಶಿ ಜಿ.ಸಿ. ಕೊರವನವರ ಮಾತನಾಡಿದರು. ಸಿರಿ ಧಾನ್ಯ ಬೆಳೆಗಳ ಬಗೆಗೆ ಎಸ್.ಎಫ್. ಮಿಶ್ರಿಕೋಟಿ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ತಾಲೂಕಿನ ಸಾವಯವ ದೃಢೀಕರಣ ಹೊಂದಿದ ನೂರಾರು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಂಕರಗೌಡ ಪಾಟೀಲ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement