ಹರಾಜಿಗೆ ಅರ್ಜಿ
ಗದಗ: ಮೀನುಗಾರಿಕೆ ಇಲಾಖೆಯಿಂದ 2014-15ನೇ ಸಾಲಿನ ಗದಗ ಜಿಲ್ಲೆಯಲ್ಲಿ ಬರುವ ವಿವಿಧ ತಾಲೂಕಿನ ಒಟ್ಟು 22 ಕೆರೆಗಳ (ಗದಗ ತಾಲೂಕು 2 ಕೆರೆ, ಮುಂಡರಗಿ ತಾಲೂಕು 10, ರೋಣ ತಾಲೂಕು 4 ಮತ್ತು ಶಿರಹಟ್ಟಿ ತಾಲೂಕು 6 ಕೆರೆಗಳು) ಮೀನುಪಾಶುವಾರು ಹಕ್ಕನ್ನು 5 ವರ್ಷ ಅವಧಿಗೆ ವಿಲೇವಾರಿ ಮಾಡಲು ಟೆಂಡರ್ ಮತ್ತು ಹರಾಜು ಪ್ರಕಟಿಸಲಾಗಿದೆ. ಟೆಂಡರ್ ಅರ್ಜಿ ಸಲ್ಲಿಸಲು ಜುಲೈ 8 ಕೊನೆಯ ದಿನವಾಗಿದೆ. ಜುಲೈ 9ರಂದು ಬೆಳಗ್ಗೆ 10.30ಕ್ಕೆ ಟೆಂಡರ್ ಮತ್ತು ಹರಾಜು ಈ ಕಚೇರಿಯಲ್ಲಿ ನಡೆಸಲಾಗುವುದು. ಆಸಕ್ತ ಮೀನುಗಾರರು ಮುಂಚಿತವಾಗಿ ನಗದು ನೀಡಬೇಕಾಗಿರುವುದರಿಂದ ಕೂಡಲೇ ಮೀನುಗಾರಿಕೆ ಸಹಾಯಕ ನಿರ್ದೇಶಕರು, ಜಿಲ್ಲಾ ಕ್ರೀಡಾಂಗಣ ಹತ್ತಿರ, ಮಾಡಳ್ಳಿ ಬಿಲ್ಡಿಂಗ್, ಗದಗ (9844534662) ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.