ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನವಿರೋಧಿ ಸರ್ಕಾರಕ್ಕೆ ತಕ್ಕ ಪಾಠ

Lingaraj Badiger
Updated On : 27 Jun 2014, 11:45 am

ನರಗುಂದ: ಜನ ವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ಗೆ ಪಶ್ಚಿಮ ಪದವೀಧರರ 4 ಕ್ಷೇತ್ರದಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದು, ಅದರಿಂದಾಗಿ ಆ ಪಕ್ಷ ಒಂದು ಸ್ಥಾನ ಮಾತ್ರ ಗೆದ್ದಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಗೆದ್ದ ಪಕ್ಷದ ಅಭ್ಯರ್ಥಿ ಎಸ್.ವಿ. ಸಂಕನೂರ ಅವರನ್ನು ಅಭಿನಂದಿಸಿ ಮಾತನಾಡಿದರು. ಸಂಕನೂರ ಹಿಂದಿನ 3 ಚುನಾವಣೆಗಳಲ್ಲಿ ಸೋತು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದಾರೆ ಎಂದರು. ಎಸ್.ಆರ್. ಹಿರೇಮಠ, ಸಿ.ಎಸ್. ಸಾಲೂಟಿಗಿಮಠ ಮಾತನಾಡಿದರು. ಜ್ಯೋತಿ ಪತ್ರಿ, ಕಿರಣ ಮುಧೋಳ, ಎಂ.ಎಸ್.ಪಾಟೀಲ, ಅಜ್ಜಪ್ಪ ಹುಡೇದ, ಎಫ್.ಆರ್. ಪಾಟೀಲ, ಬಿ.ಬಿ. ಐನಾಪುರ, ಡಾ. ಜಾಬಣ್ಣವರ, ಗುರಪ್ಪ ಆದಪ್ಪನವರ, ಬಿ.ಎಸ್.ಪಾಟೀಲ, ಪ್ರಕಾಶ ಪಟ್ಟಣಶಟ್ಟಿ, ಚಂದ್ರು ದಂಡಿನ, ವಾಸು ಜೋಗಣ್ಣವರ, ಶೈಲಾ ನರಗುಂದ, ಮಲ್ಲವ್ವ ಗುಂಜಾಳ, ಬಸವಣ್ಣವ್ವ ಪಿಡ್ಡನಾಯ್ಕರ, ಎಲ್.ಎಂ. ಪಾಟೀಲ, ಹಸನ ನವಲೆ, ಅಜ್ಜು ಪಾಟೀಲ, ಉಮೇಶ ಯಳ್ಳೂರ ಮುಂತಾದವರು ಇದ್ದರು.
--
ಪರಿಸರ ಸಂರಕ್ಷಿಸಿ
ಮುಳಗುಂದ: ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೋಬ್ಬರ ಆದ್ಯ ಕರ್ತವ್ಯವಾಗಬೇಕೆಂದು ಪಿಎಸ್‌ಐ ಪಿ.ಜಿ. ಕವಟಗಿ ಅಭಿಪ್ರಾಯ ಪಟ್ಟರು. ಸ್ಥಳೀಯ ಪಟ್ಟಣ ಪಂಚಾಯಿತಿ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪರಿಸರ ರಕ್ಷಣೆಯ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಯುವಕರು ಮುಂದಾಗಬೇಕು. ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದರು. ಪಪಂ ಎದುರಿನ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ನೂರಾರು ಸಸಿ ನೆಡಲಾಯಿತು. ಪಪಂ ಅಧ್ಯಕ್ಷೆ ಲಕ್ಷ್ಮವ್ವ ಕಣವಿ, ಉಪಾಧ್ಯಕ್ಷೆ ಬೀಬಿಜಾನ ಗುಬ್ಬಿ, ಪಪಂ ಸದಸ್ಯ ಆರ್.ಎನ್. ದೇಶಪಾಂಡೆ, ಸಿ.ಬಿ. ಬಡ್ನಿ, ಬಿ.ವಿ. ಸುಂಕಾಪುರ, ಮೌಲಾಸಾಬ ಸದರಭಾವಿ, ಕೆ.ಎಲ್. ಕರಿಗೌಡ, ಗಂಗಮ್ಮ ಶಿರಹಟ್ಟಿ, ಬುದ್ದಪ್ಪ ಮಾಡಳ್ಳಿ, ಬಸವಣ್ಣೆಪ್ಪ ಉಜ್ಜಣ್ಣವರ, ಸಿದ್ರಾಮಯ್ಯ ಹಿರೇಮಠ, ಸುರೇಶ ರಾಮಣ್ಣವರ, ಅಶೋಕ ಸೋನಗೋಜಿ, ಪಪಂ ಮುಖ್ಯಾಧಿಕಾರಿ ವಿ.ಜಿ. ಸುಲಾಖೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement