ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜೀರ್ಣೋದ್ಧಾರ ಕಾರ್ಯ ಶ್ಲಾಘನೀಯ

Lingaraj Badiger
Updated On : 27 Jun 2014, 11:49 am

ಲಕ್ಷ್ಮೇಶ್ವರ: ಪ್ರತಿಯೊಂದು ಗ್ರಾಮದಲ್ಲಿರುವ ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸುವ ಮೂಲಕ ಜನರಲ್ಲಿ ಜಾಗೃತ ಕಾರ್ಯ ಮಾಡುತ್ತಿರುವುದು ಉತ್ತಮ ಕೆಲಸ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಸಮೀಪದ ಪು. ಬಡ್ನಿ ಗ್ರಾಮದಲ್ಲಿನ ಗ್ರಾಮದೇವತೆಯ ನೂತನ ದೇವಸ್ಥಾನದ ಬಾಗಿಲು ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮದೇವತೆಯ ದೇವಸ್ಥಾನಗಳು ಜಾಗೃತ ಕೇಂದ್ರ ಸ್ಥಾನಗಳಾಗಿದ್ದು ಅವುಗಳ ಶುಚಿತ್ವ ಕಾಪಾಡುವ ಕಾರ್ಯವನ್ನು ಗ್ರಾಮದ ಜನತೆ ಮಾಡಬೇಕಾಗಿದೆ. ದೇವಸ್ಥಾನಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಜನರಲ್ಲಿ ಧಾರ್ಮಿಕ ಭಾವನೆ ಉಳಿಯುವಂತೆ ಮಾಡಬೇಕಾಗಿದೆ.
ಭಾರತೀಯ ಪರಂಪರೆಯನ್ನು ನಾಶಗೊಳಿಸುತ್ತಿರುವುದು ಖಂಡನಾರ್ಹ. ಇದಕ್ಕೆ ತುಪ್ಪ ಸುರಿದಂತೆ ನಮ್ಮ ಬುದ್ದಿ ಜೀವಿಗಳು ವರ್ತನೆ ಮಾಡುತ್ತಿರುವುದು ನೋವಿನ ಸಂಗತಿ ಎಂದರು.
ಸಂಕದಾಳದ ಹಾಲಸ್ವಾಮಿಗಳ ಮಠದ ಸೋಮೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ಸುಭಾಷ್ ಬಟಗುಕಿ, ಪರಮೇಶ್ವರಪ್ಪ ಬಟಗುರ್ಕಿ, ಅಶೋಕ ಬಟಗುರ್ಕಿ, ಶಿವಪುತ್ರಪ್ಪ ಚೋಟಗಲ್, ಮತ್ತಣ್ಣ ಚೋಟಗಲ್, ಶೇಖಣ್ಣ ಕರೆಣ್ಣವರ, ಸುಭಾಷ್ ಕರೆಣ್ಣವರ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಮುಂದಿನಮನಿ, ಮಾಜಿ ಅಧ್ಯಕ್ಷೆ ಫಕ್ಕೀರವ್ವ ಮಾದರ, ಹನುಮಂತಪ್ಪ ಹೊನ್ನಪ್ಪನವರ, ಶಿದ್ಲಿಂಗಪ್ಪ ಹರದಗಟ್ಟಿ, ಹಸನಸಾಬ್ ಯಳವತ್ತಿ, ಶೇಖಣ್ಣ ಅಂಗಡಿ, ಮಹಾದೇವಪ್ಪ ರಾಮಗೇರಿ, ಯಲ್ಲಪ್ಪ ತಳವಾರ, ನಾಗರಾಜ ಬಟಗುರ್ಕಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement