ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗಟಾರ ನಿರ್ಮಿಸಲು ಆಗ್ರಹಿಸಿ ಮನವಿ

Lingaraj Badiger
Updated On : 28 Jun 2014, 10:34 am

ರೋಣ: ಪಟ್ಟಣದ ಪುರಸಭೆ ವ್ಯಾಪ್ತಿಯ 13ನೇ ವಾರ್ಡಿನ ಶಿವಪೇಟಿ 3ನೇ ಕ್ರಾಸ್‌ನಲ್ಲಿ ಯಾವುದೇ ಗಟಾರ ಇಲ್ಲದೇ ಮಲಿನ ನೀರು ಎಲ್ಲೆಂದರಲ್ಲಿ ಹರಿಯುತ್ತಿದೆ. ಅಲ್ಲದೇ ಮಳೆಗಾಲದಲ್ಲಿ ಗಲೀಜು ನೀರು ಮನೆಗೆ ನುಗ್ಗುತ್ತದೆ. ಕೂಡಲೇ ಗಟಾರ ನಿರ್ಮಿಸಿ ಎಂದು ಶಿವಪೇಟಿ 3ನೇ ಕ್ರಾಸ್ ನಿವಾಸಿಗಳು ಗುರುವಾರ ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಪ್ರಭಾರಿ ಮುಖ್ಯಾಧಿಕಾರಿ ಆರ್.ಎಂ. ಪಾಟೀಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ವೇಳೆ ನಿವಾಸಿಗಳಾದ ಅನ್ನಕ್ಕ ಹುಲ್ಲೂರ, ಕಾಶವ್ವ ಚಿತ್ರಗಾರ ಮಾತನಾಡಿ, ಶಿವಪೇಟಿ 3ನೇ ಕ್ರಾಸ್ ಹೊರತುಪಡಿಸಿ ಪಟ್ಟಣದ ಎಲ್ಲ ಬಡವಾಣೆಗಳಲ್ಲಿ ಗಟಾರ, ರಸ್ತೆ ನಿರ್ಮಿಸಲಾಗಿದೆ. ಆದರೆ, 3ನೇ ಕ್ರಾಸ್‌ನಲ್ಲಿ ಮಾತ್ರ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪುರಸಭೆ ಕ್ರಮ ಕೈಗೊಳ್ಳುತ್ತಿಲ್ಲ ಎಂದರು. ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ ಮಾತನಾಡಿ, ಶಾಸಕರು ಸದ್ಯ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲಿಂದ ಬಂದ ಬಳಿಕ ಅವರೊಂದಿಗೆ ಈ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಾಗಪ್ಪ ದೇಶಣ್ಣವರ, ಪ್ರೇಮಾ ಕಲೆಗಾರ, ಅಂದಕ್ಕ ಹುಲ್ಲೂರ, ದಾವಲಬಿ ಇಟಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement