ಮಾದಕ ವ್ಯಸನದಿಂದ ದೂರವಿರಿ: ವಗ್ಗರ
ಮುಂಡರಗಿ: ಗುಟಕಾ, ಸಿಗರೇಟ್, ಸೇರಿದಂತೆ ಅನೇಕ ಮಾದಕ ವಸ್ತುಗಳ ಸೇವನೆಯಿಂದ ವಿದ್ಯಾರ್ಥಿಗಳು, ಯುವಕರು ದೂರವಿರಬೇಕು. ಅಂದಾಗ ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯ ಎಂದು ಮುಂಡರಗಿ ಪೊಲೀಸ್ ಠಾಣೆಯ ಮಹಿಳಾ ಎಎಸ್‌ಐ ಉಮಾ ವಗ್ಗರ ಹೇಳಿದರು. ಅವರು ಶುಕ್ರವಾರ ಪಟ್ಟಣದ ಜ. ಅನ್ನದಾನೀಶ್ವರ ಪಪೂ ಕಾಲೇಜಿನಲ್ಲಿ ಮುಂಡರಗಿ ಪೊಲೀಸ್ ಠಾಣೆ, ಜ.ಅ.ಸಂ. ಪ.ಪೂ. ಕಾಲೇಜ್ ಸಂಯುಕ್ತವಾಗಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಎಸ್‌ಐ ಬಿ.ಎಂ. ಪೂಜಾರ, ಕಾಲೇಜಿನ ವಿಶೇಷ ಆಡಳಿತಾಧಿಕಾರಿ ಎಸ್.ಎಂ. ಹೊಸಮಠ, ಪ್ರೊ. ಎನ್.ಎಫ್. ಅಕ್ಕೂರ, ನಿವೃತ್ತ ಪ್ರಾಚಾರ್ಯ ವಿ.ಎಫ್. ಅಂಗಡಿ ಮಾತನಾಡಿದರು. ಎ.ವಿ. ಹಳ್ಳಿಕೇರಿ, ಪಿ.ಬಿ. ಹಿರೇಮಠ, ಆರ್.ಎಸ್. ಚೆನ್ನಶೆಟ್ಟರ ಇದ್ದರು.