ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶರಣ ತತ್ವದರ್ಶನ ಪ್ರವಚನ ಇಂದಿನಿಂದ

Lingaraj Badiger
Updated On : 28 Jun 2014, 10:31 am

ಮುಂಡರಗಿ:  ಮುಂಡರಗಿಯ ಜ. ತೋಂಟದಾರ್ಯ ಮಠದಲ್ಲಿ 1 ತಿಂಗಳ ಕಾಲ ಶರಣ ತತ್ವದರ್ಶನ ಪ್ರವಚನ ಉದ್ಘಾಟನೆ ಸಮಾರಂಭ ಜೂ. 28ರಿಂದ ಸಂಜೆ 7ಕ್ಕೆ ಜರುಗಲಿದೆ.
 ಹಾವೇರಿ ಸಂಸದ ಶಿವಕುಮಾರ ಉದಾಸಿ ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಪ್ರವಚನಕಾರರಾಗಿ ದೆಹಲಿ ತೋಂಟದಾರ್ಯ ಶಾಖಾ ಮಠದ ಮಹಾಂತದೇವರು ಆಗಮಿಸಲಿದ್ದಾರೆ. ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ವರ್ತಕರ ಸಂಘದ ಅಧ್ಯಕ್ಷ ದೊಡ್ಡಬಸಣ್ಣ ಕಾಲವಾಡ ಆಗಮಿಸಲಿದ್ದಾರೆ. ಡಾ. ರಿಯಾಜ ಪಾಷಾ ಅತಿಥಿ ಉಪನ್ಯಾಸಕರಾಗಿ ಮಾತನಾಡಲಿದ್ದಾರೆ.
 ಇದೇ ಸಂದರ್ಭದಲ್ಲಿ ಪುರಸಭೆ ನೂತನ ಅಧ್ಯಕ್ಷೆ ಭಾರತಿ ಹಕ್ಕಿ, ಉಪಾಧ್ಯಕ್ಷ ಸೋಮನಗೌಡ ಗೌಡ್ರ ಅವರಿಗೆ ಸನ್ಮಾನಿಸಲಾಗುವುದು. ಶ್ರೀನಿವಾಸ ರಾಮಕೃಷ್ಣ ದೊಡ್ಡಮನಿ ಭಕ್ತಿ ಸೇವೆ ವಹಿಸುವರು. ವಿನುತಾ ಅರ್ಕಸಾಲಿ ಅವರಿಂದ ಧರ್ಮಗ್ರಂಥ ಪಠಣ ಹಾಗೂ ಚೇತನ್ ಹೊಸಮನಿ ಅವರಿಂದ ವಚನ ಚಿಂತನ ಜರುಗಲಿದೆ. ಪ್ರತಿನಿತ್ಯ ಕರ್ನಾಟಕ ಜನಪದ ಕಲಾ ತಂಡದ ಸದಸ್ಯರಿಂದ ಸಂಗೀತ ಸೇವೆ ನಡೆಯಲಿದೆ. ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಶೋಭೆ ತರಬೇಕೆಂದು ಪ್ರವಚನ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement