ಗೆಲವಿನ ಹಿಂದಿನ ಶ್ರಮ ಎಲ್ಲರದ್ದು: ಸಂಕನೂರ
ಗದಗ: ನನ್ನ ಗೆಲವಿನ ಹಿಂದಿನ ಶ್ರಮ ಎಲ್ಲರಿಗೂ ಸೇರಿದ್ದು ಎಂದು ವಿಧಾನ ಪರಿಷತ್ ನೂತನ ಸದಸ್ಯ ಎಸ್.ವಿ. ಸಂಕನೂರ ಹೇಳಿದರು. ಗುರುವಾರ ಸ್ಥಳೀಯ ಡಿಜಿಎಂ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಚೇರ್ಮನ್ ಎಸ್.ಬಿ. ಸಂಶಿಯವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲರ ಮಾತನಾಡಿದರು. ಡಿಜಿಎಂ ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಸಿಬ್ಬಂದಿ, ಶಿವಾನಂದ ಪಿಯು ಕಾಲೇಜು ಸಿಬ್ಬಂದಿ, ವೈದ್ಯ ವಿದ್ಯಾರ್ಥಿಗಳು ಹಾಜರಿದ್ದರು.