ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಜನಹಿತ ವೇದಿಕೆ ಉದ್ಘಾಟನೆ: ಮೆರವಣಿಗೆ

Rashmi Kasaragodu
Updated On : 29 Jun 2014, 1:58 am

ಗದಗ: ಕರ್ನಾಟಕ ಜನಹಿತ ವೇದಿಕೆಯ ಗದಗ ಜಿಲ್ಲಾ ಘಟಕದ ಉದ್ಘಾಟನೆ ನಿಮಿತ್ತ ಶನಿವಾರ ನಗರದಲ್ಲಿ ಆಯೋಜಿಸಿದ್ದ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಿಂದ ಪ್ರಾರಂಭವಾದ ಮೆರಣಿಗೆಗೆ ನಗರಸಭೆಯ ಅಧ್ಯಕ್ಷೆ ರುದ್ರವ್ವ ಕೆರಕಲಮಟ್ಟಿ ಚಾಲನೆ ನೀಡಿದರು. ವಿವಿಧ ಜನಪದ ತಂಡಗಳು ಹಾಗೂ ಕನ್ನಡ ಭಾಷಾಭಿಮಾನ ಮೂಡಿಸುವ ಗೀತೆಗಳು ಎಲ್ಲರ ಗಮನ ಸೆಳೆದವು. ನಗರದ ಸ್ಟೇಷನ್ ರಸ್ತೆ, ಮಹೇಂದ್ರಕರ ಸರ್ಕಲ್, ಗಾಂಧಿ ವೃತ್ತದ ಮೂಲಕ ಕಾರ್ಯಕ್ರಮದ ಸ್ಥಳದ ತೋಂಟದಾರ್ಯ ಕಲ್ಯಾಣ ಮಂಟಪಕ್ಕೆ ಮೆರವಣಿಗೆ ಬಂದು ತಲುಪಿತು. ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement