ತೆರೆದ ಚರಂಡಿಗೆ ಕಾಂಕ್ರೀಟ್ ಬೆಡ್: ಮನವಿ
ಗಜೇಂದ್ರಗಡ: ಸ್ಥಳೀಯ ಕೊಳ್ಳಿಯವರ ವೃತ್ತ ಬಳಿಯ ಗುರು ರಾಘವೇಂದ್ರ ಸ್ವಾಮಿಗಳ ಮಠದ ಎದುರಿನ ಪ್ರಮುಖ ರಸ್ತೆ ಪಕ್ಕದ ತೆರೆದ ಚರಂಡಿಗೆ ಸಿ.ಸಿ. ಬೆಡ್ ಹಾಕುವ ಮೂಲಕ ನೈರ್ಮಲ್ಯ ರಕ್ಷಣೆ ಜತೆ ವಾಹನ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ. ರಾಯರ ಮಠದ ಸುತ್ತಲೂ ಉತ್ತಮ ಪರಿಸರ ನಿರ್ಮಿಸುವ ಉದ್ದೇಶದಿಂದ ಹಲವಾರು ಬಾರಿ ಚರಂಡಿಗೆ ಸಿ.ಸಿ. ಬೆಡ್ ಅಳವಡಿಸಲು ಪುರಸಭೆಯ ಆಡಳಿತಕ್ಕೆ ಭಕ್ತರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಇಕ್ಕಟ್ಟಾದ ಸ್ಥಳದಲ್ಲಿರುವ ಮಠದ ಮುಂದೆ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಸೋಮು ದಾನಿ, ಜಗದೀಶ ಕನಕೇರಿ, ಗೋಪಿನಾಥಸಾ ಕಾಟವಾ, ಅಶೋಕ ಯಂಕಂಚಿ, ಷಣ್ಮುಖ ಮಿಸ್ಕಿನ, ತುಕಾರಾಮಸಾ ರಾಯಬಾಗಿ, ಕಳಕುಸಾ ರಾಜೊಳ್ಳಿ ಆಗ್ರಹಿಸಿದ್ದಾರೆ.