ತೋಟಗಾರಿಕೆ ಬೆಳೆಯಿಂದ ಆರೋಗ್ಯ: ಕಾಶೀನಾಥ
ಗದಗ: ವಿವಿಧ ತರಕಾರಿ, ಹಣ್ಣು, ಹಸಿರು ತಪ್ಪಲು ಪದಾರ್ಥ ತಿನ್ನುವುದರಿಂದ ಆರೋಗ್ಯ ಭಾಗ್ಯವಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆಯ ಕಾಶೀನಾಥ ಭದ್ರಣ್ಣವರ ಹೇಳಿದರು. ತೋಂಟದಾರ್ಯ ಮಠದಲ್ಲಿ ಏರ್ಪಡಿಸಿದ್ದ 2177ನೇ ಶಿವಾನುಭವ ಕಾರ್ಯಕ್ರಮದಲ್ಲಿ ವೈಜ್ಞಾನಿಕ ತೋಟಗಾರಿಕೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಹನಿ ನೀರಾವರಿ ಮೂಲಕ ಕಾಯಿಪಲ್ಲೆ, ವಿವಿಧ ತಳಿಯ ಹೂವುಗಳ ಪುಷ್ಪೋದ್ಯಮ ಬೆಳೆಗೆ ತೋಟಗಾರಿಕೆ ಇಲಾಖೆಯಿಂದ ಸಾಲ ಸೌಲಭ್ಯ ಇದೆ ಎಂದರು. ಸಾನ್ನಿಧ್ಯ ವಹಿಸಿದ್ದ ತೋಂಟದ ಡಾ. ಸಿದ್ಧಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ರತ್ನಕ್ಕ ಪಾಟೀಲ ನಿರೂಪಿಸಿದರು. ಎಸ್.ಎನ್. ಆದಿ ಸ್ವಾಗತಿಸಿದರು. ಪ್ರಭುದೇವ ಹಿರೇಮಠ, ಉಪಾಧ್ಯಕ್ಷ ಶೇಖಣ್ಣ ಕಳಸಾಪುರಶೆಟ್ರ, ಚಂದ್ರಶೇಖರ ಅರಳಿ, ವೀರಣ್ಣ ಜ್ಯೋತಿ ಇದ್ದರು.