ದೊಡ್ಡಾಟ ತರಬೇತಿ ಶಿಬಿರ ಪೂರ್ವಭಾವಿ ಸಭೆ
ಗದಗ: ನಗರದಲ್ಲಿ ಜುಲೈ 20 ರಿಂದ 30ರ ವರೆಗೆ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಆಶ್ರಯದಲ್ಲಿ ನಡೆಸಲಾಗುವ ದೊಡ್ಡಾಟ ತರಬೇತಿ ಶಿಬಿರದ ಕುರಿತ ಪೂರ್ವಭಾವಿ ಸಭೆ ಗುರುವಾರ ನಡೆಯಿತು. ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಣ್ಣ ಜಕಬಾಳ ಸಭೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಮರಂಗ ಇಂಗಳಗಿ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳೀಯ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಶಿಬಿರ ನಡೆಯಲಿದೆ. ಗ್ರಾಮರಂಗದ ಎಂ.ಎಸ್. ಮಾಳವಾಡ, ಬಿ.ಬಿ. ಬಣ್ಣದ ದೊಡ್ಡಾಟ ಕಲಾಮೇಳದ ಅಶೋಕ ಬಣ್ಣದ, ಅನ್ನದಾನಿ ಹಿರೇಮಠ, ಶಂಕರಗೌಡ ಪಾಟೀಲ, ಅಶೋಕ ಸುತ್ತೂರ, ಶಶಿಕಾಂತ ಕೊರ್ಲಹಳ್ಳಿ, ಕಿಸೋರಬಾಬು ನಾಗರಕಟ್ಟಿ, ಇದ್ದರು.
ರೈಲು ಬೇಡಿಕೆ: ಮನವಿ
ಗದಗ: ಗದಗ ರೈಲು ನಿಲ್ದಾಣದಲ್ಲಿ ಬೆಟಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಯಾಣಿಕರು, ಸಾರ್ವಜನಿಕರ ಅನುಕೂಲಕ್ಕಾಗಿ ಗದಗ-ಬೆಟಗೇರಿ ರೈಲು ನಿಲ್ದಾಣದ ನಾಮಕರಣ ಒಳಗೊಂಡು ಇನ್ನುಳಿದ ಬೇಡಿಕೆಗಳನ್ನು ಈಡೇರಿಸುವಂತೆ ಬೆಟಗೇರಿ ಹೋರಾಟ ಸಮಿತಿಯಿಂದ ಗಣೇಶಸಿಂಗ್ ಬ್ಯಾಳಿಯವರ ನೇತೃತ್ವದಲ್ಲಿ ಸಂಸದ ಶಿವಕುಮಾರ ಉದಾಸಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಸಂಸದರು ಮನವಿಗೆ ಸ್ಪಂದಿಸಿ ಶೀಘ್ರದಲ್ಲಿಯೇ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು. ಈ.ಜಿ. ಚೋಳಿನ, ಬಿ.ಬಿ. ಗಿಡ್ನಂದಿ, ವಿ.ಈ. ಕಲಾಲ, ಕೃಷ್ಣಾ ರಾಯಬಾಗಿ, ಕೆ.ಆರ್. ಮರವಾಡೆ, ಅರ್ಜುನಸಾ ಮೆರವಾಡೆ, ಮಂಜು ತಳವಾರ, ಉಸ್ತಾಫ್ ಮುಲ್ಲಾ, ನಾಮದೇವ ಜಗದಾಳೆ, ಎಂ.ಎಂ. ಮುಲ್ಲಾ, ಮಂಜು ಮ್ಯಾಗೇರಿ, ಶ್ರೀನಿವಾಸ ಕರಿ, ಬಾಗಡೆ ಗುರುಗಳು, ಶ್ರೀನಿವಾಸ ಹುಬ್ಬಳ್ಳಿ, ಲಿಂಗರಾಜ ಬಗಲಿ, ಯಲ್ಲಪ್ಪ ಕಾಂಬಳೇಕರ, ಉಮಾಕಾಂತ ಅಕ್ಕಿ ಮುಂತಾದವರು ಇದ್ದರು.