ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧರ್ಮ ರಥಯಾತ್ರೆಗೆ ಚಾಲನೆ

Rashmi Kasaragodu
Updated On : 29 Jun 2014, 2:00 am

ಗದಗ:  ಭ್ರಮರಾಂಬಾ ಮಲ್ಲಿಕಾರ್ಜುನ ಸ್ವಾಮಿ ಕಲ್ಯಾಣೋತ್ಸವದ ನಿಮಿತ್ತ ನಗರದ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಧರ್ಮ ರಥಯಾತ್ರೆಗೆ ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಗೌರವಾಧ್ಯಕ್ಷ ರತ್ನಾಕರ ಭಟ್ಟ ಜೋಶಿ, ಆನಂದ ಗೋಡಖಿಂಡಿ, ದತ್ತಪ್ರಸನ್ನ ಪಾಟೀಲ, ಎಸ್.ಎಸ್. ಪಟ್ಟಣಶೆಟ್ಟಿ, ವಿಶ್ವನಾಥ ಚಿಂಚಲಿ, ಗಣೇಶ ಭಟ್ಟ ಪುರಾಣಿಕ, ಬಾಲಚಂದ್ರ ಭರಮಗೌಡ್ರ, ಅಶೋಕ ಮಂದಾಲಿ, ಬೆಟದಯ್ಯ ಹಿರೇಮಠ, ಎಂ.ಎಸ್. ಪರ್ವತಗೌಡ್ರ, ರಾಜಗೋಪಾಲಾಚಾರ್ಯ ಮಳಗಿ, ರವಿ ಪೂಜಾರ ಸೇರಿದಂತೆ ಹಲವಾರು ಗಣ್ಯರು ಹಾಗೂ ಶ್ರೀಶೈಲ ಮಲ್ಲಿಕಾರ್ಜುನ ಮತ್ತು ಭ್ರಮರಾಂಬಿಕೆಯ ಭಕ್ತರು ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಮಹಿಳೆಯ ಪೂರ್ಣಕುಂಭ ಹಾಗೂ ಪಂಚಾಚಾರ್ಯ ವೇದ ಆಗಮ ಪಾಠ ಶಾಲೆಯ ವಟುಗಳು, ವಿವಿಧ ಮಂಗಳ ವಾದ್ಯ ಮೇಳ ಪಾಲ್ಗೊಂಡಿದ್ದವು. ಮೆರವಣಿಗೆಯ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement