ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಧರ್ಮ ರಥಯಾತ್ರೆಗೆ ಸ್ವಾಗತ

Rashmi Kasaragodu
Updated On : 29 Jun 2014, 2:00 am

ನರಗುಂದ: ಶ್ರೀಶೈಲದಿಂದ ಲೋಕ ಕಲ್ಯಾಣಕ್ಕಾಗಿ ಆರಂಭಿಸಿರುವ ಧರ್ಮ ರಥಯಾತ್ರೆ ಶನಿವಾರ ನರಗುಂದಕ್ಕೆ ಆಗಮಿಸಿತು. ನಗರದ ಭಕ್ತರು ಕುಂಭ ಮೇಳದೊಂದಿಗೆ ಯಾತ್ರೆಯನ್ನು ಸ್ವಾಗತಿಸಿದರು.
ಮೆರವಣಿಗೆಗೆ ಚಾಲನೆ ನೀಡಿದ ಸಚಿವ ಸಿ.ಸಿ. ಪಾಟೀಲ ಮಾತನಾಡಿದರು. ಪಟ್ಟಣದ ಸೋಮಾಪುರದ ಮಾರುತೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕುಂಭ ಮೇಳ, ಜಾಂಜ್, ರಗ್ಗಲಗಿ ಮೇಳ, ಡೊಳ್ಳು ಮೇಳಗಳ ಪಾಲ್ಗೊಂಡಿದ್ದವು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್‌ನಿಂದ ರಥಯಾತ್ರೆಯನ್ನು ಬೀಳ್ಕೊಡಲಾಯಿತು. ಪುರಸಭೆ ಅಧ್ಯಕ್ಷೆ ಜ್ಯೋತಿ ಪತ್ರಿ, ಉಪಾಧ್ಯಕ್ಷ ಕಿರಣ ಮುಧೋಳೆ, ಸದಸ್ಯ ಉಮೇಶ ಕುಡನ್ನವರ, ಪ್ರಕಾಶ ಪಟ್ಟಣಶಟ್ಟಿ, ಚಂದ್ರು ಪವಾರ, ಶೈಲಾ ನರಗುಂದ, ಬಸಣ್ಣವ್ವ ಪಿಡ್ಡನಾಯ್ಕರ, ಮಲ್ಲವ್ವ ಗುಂಜಾಳ, ಸಿ.ಎಚ್. ಕೋರಿ ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement