ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳು ಸದೃಢ ಆಗಿರಬೇಕು: ವಿವೇಕಗೌಡ

Rashmi Kasaragodu
Updated On : 29 Jun 2014, 1:57 am

ಗದಗ:  ಒಂದು ನಾಡು, ಸಂಸ್ಕೃತಿ ಉತ್ತಮವಾದ ಸಂಸ್ಕಾರ ನೀಡಬೇಕಾದಲ್ಲಿ ಅಲ್ಲಿರುವ ಮಕ್ಕಳು ಮೊದಲು ಸದೃಢವಾಗಿರಬೇಕು. ಹಾಗಾದಲ್ಲಿ ಒಂದು ದೇಶ ಸದೃಢವಾಗಿರಲು ಸಾಧ್ಯ ಎಂದು ಬಿಆರ್‌ಪಿ ಅಧಿಕಾರಿ ವಿವೇಕಾನಂದಗೌಡ ಪಾಟೀಲ ತಿಳಿಸಿದರು. ಅವರು ಶುಕ್ರವಾರ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ 10ರಲ್ಲಿ ವಿಶ್ವ ಮಕ್ಕಳ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಸಿಗೆ ನೀರುಣಿಸುವ ಮೂಲಕ ಸಮನ್ವಯಾಧಿಕಾರಿ ಎಂ.ಪಿ. ಚಿಂಚೆವಾಡೆ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಎಸ್.ಎನ್. ಬಳ್ಳಾರಿ ಮಾತನಾಡಿದರು. ಎಸ್.ಎ. ಚಂದಪ್ಪನವರ, ಜಿ.ಆರ್. ಪಾಸ್ತೆ, ಎಸ್.ಆರ್. ಹಲಕುರ್ಕಿ, ಲಲಿತಾ ಮ್ಯಾಗೇರಿ ಉಪಸ್ಥಿತರಿದ್ದರು. ಜಿ.ಎಸ್. ಜತ್ತಿ ಸ್ವಾಗತಿಸಿದರು. ಎಸ್.ಸಿ. ಹಾನಗಲ್ಲ ನಿರೂಪಿಸಿದರು. ಜೆ.ಜಿ. ಬಿಸರಳ್ಳಿ ವಂದಿಸಿದರು. ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement