ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಾಲಾ ಕಟ್ಟಡಕ್ಕೆ ಭೂಮಿಪೂಜೆ

Rashmi Kasaragodu
Updated On : 29 Jun 2014, 1:59 am

ಗದಗ: ನಗರದ ಮುಳಗುಂದ ರಸ್ತೆಯಲ್ಲಿರುವ ಬ್ಯಾಂಕರ್ಸ್ ಕಾಲೋನಿಯಲ್ಲಿ ಜೂ. 30ರಂದು ಬೆಳಗ್ಗೆ 10.30ಕ್ಕೆ  ಸೇವಾ ಭಾರತಿ ಟ್ರಸ್ಟ್‌ನ ಅರುಣೋದಯ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯ ಸೇವಾ ಚೇತನ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮ ಜರುಗಲಿದೆ. ಟ್ರಸ್ಟ್‌ನ ಅಧ್ಯಕ್ಷ ತುಕಾರಾಂಸಿಂಗ್ ಜಮಾದಾರ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. 7 ವರ್ಷಗಳ ಹಿಂದೆ 50 ಮಕ್ಕಳೊಂದಿಗೆ ಪ್ರಾರಂಭಿಸಿದ ಈ ಶಾಲೆ ಇಂದು ಸಾರ್ವಜನಿಕರ ಮತ್ತು ದಾನಿಗಳ ಸಹಕಾರದಿಂದ 2.5 ಕೋಟಿ ವೆಚ್ಚದಲ್ಲಿ ನಾಲ್ಕು ಮಹಡಿಗಳ ಕಟ್ಟಡ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ನವದೆಹಲಿಯ ಆರ್‌ಎಸ್‌ಎಸ್‌ನ ವಿಶ್ವ ವಿಭಾಗದ ಸಂಯೋಜಕ ಶ್ಯಾಂ ಪರಾಂಡೆ, ಸಿದ್ದರಾಮಪ್ಪ ಸಂಶಿಮಠ, ಮಂಜುನಾಥ ಬೇಲೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಆರ್‌ಎಸ್‌ಎಸ್ ಪ್ರಮುಖ ಮಹೇಶ ಬೆಂಡೆ ಮುಖ್ಯ ವಕ್ತಾರರಾಗಿ ಪಾಲ್ಗೊಳ್ಳುವರು. ಹುಬ್ಬಳ್ಳಿ ಸೇವಾ ಭಾರತಿ ಟ್ರಸ್ಟ್ ಅಧ್ಯಕ್ಷ ಡಾ. ರಘು ಅಕಮಂಚಿ ಅಧ್ಯಕ್ಷತೆ ವಹಿಸುವರು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement