ಸಂಸದ ಉದಾಸಿ ಸನ್ಮಾನ
ಗದಗ: ಎರಡನೇ ಬಾರಿಗೆ ಆಯ್ಕೆಯಾದ ಹಾವೇರಿ-ಗದಗ ಲೋಕಸಭೆ ಸದಸ್ಯ ಶಿವಕುಮಾರ ಉದಾಸಿ ಅವರಿಗೆ ಗದಗ ಜಿಲ್ಲಾ ಹಿಂದುಳಿದ ಕ್ಷತ್ರಿಯ ಮಹಾಸಭಾವತಿಯಿಂದ ನಗರದ ಮುಳಗುಂದ ನಾಕಾ ಹತ್ತಿರವಿರುವ ಮರಾಠಾ ಸಮಾಜದ ಸಭಾ-ಭವನದಲ್ಲಿ ಮುಖಂಡರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಸದ ಉದಾಸಿ, ಜಿಲ್ಲೆಯ ಹಿಂದುಳಿದ ಹಾಗೂ ಕ್ಷತ್ರಿಯ ಎಲ್ಲ ಪಂಗಡಗಳ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲ ಸೌಕರ್ಯ ಸರ್ಕಾರದ ವತಿಯಿಂದ ದೊರಕಿಸಿಕೊಡುತ್ತೇನೆ ಎಂದರು. ಸಭೆಯಲ್ಲಿ ಜಿಲ್ಲಾ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಖಟವಟೆ, ಮರಾಠ ಸಮಾಜದ ಮೋಹನ ಗ್ವಾರಿ, ಎಂ.ಎನ್. ಸಾಳುಂಕೆ, ಗವಳಿ ಸಮಾಜದ ಲಕ್ಷ್ಮಣ ದಹಿಂಡೆ, ರಜಪೂತ ಸಮಾಜದ ಗಿರಿಧರಸಿಂಗ್ ಬ್ಯಾಳಿ, ಕುರುಬರ ಸಮಾಜದ ಫಕ್ಕೀರಪ್ಪ ಹೆಬಸೂರ ಇದ್ದರು.