ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸ್ಕೌಟ್ಸ್, ಗೈಡ್ಸ್‌ನಿಂದ ಸೇವಾ ಮನೋಭಾವನೆ ಬೆಳವಣಿಗೆ

Vishwanath S
Updated On : 3 Mar 2014, 12:01 pm

ಮುಂಡರಗಿ: ಮಕ್ಕಳಲ್ಲಿ ಸೇವಾ ಮನೋಭಾವನೆ ಬೆಳೆಸುವಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಪ್ರಮುಖ ಪಾತ್ರವಹಿಸುತ್ತದೆ ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎ. ರಡ್ಡೇರ ಹೇಳಿದರು.
ಅವರು ಈಚಗೆ ತಾಲೂಕಿನ ಬರದೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2013-14ನೇ ಸಾಲಿನ ದ್ವಿತೀಯ ಸೋಪಾನ್ ಪರೀಕ್ಷೆಗಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಅದರ ಲಾಭ ತಿಳಿಸಬೇಕು ಎಂದರು.
ಎ.ವೈ. ನವಲಗುಂದ ಮಾತನಾಡಿ, ಶಿಸ್ತು, ಸಂಯಮಕ್ಕೆ ಮತ್ತೊಂದು ಹೆಸರೇ ಸ್ಕೌಟ್ಸ್ ಮತ್ತು ಗೈಡ್ಸ್ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಕೆಂಚಪ್ಪ ಗದಗ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ ಇಟಗಿ, ಎಚ್.ಎನ್. ಜಾಧವ, ಎಂ.ಡಿ. ಭಾವಿಮನಿ, ದೇವಪ್ಪ ಇಟಗಿ, ಕೆ.ಟಿ. ಮಲ್ಲೇಶಪ್ಪ, ಎಚ್.ಎಂ. ಹದ್ಲಿ, ಎ.ಸಿ. ಕೆಳಗಿನಮನಿ ಇದ್ದರು. ಶಿಕ್ಷಕ ಎಂ.ಕವಲೂರ ಸ್ವಾಗತಿಸಿದರು. ಎಸ್.ಎಲ್. ಭಲ್ಲಾರಿ ನಿರೂಪಿಸಿದರು. ಎಂ.ಬಿ. ಮೇಟಿ ವಂದಿಸಿದರು.  
ರಸ್ತೆ ಅಭಿವೃದ್ಧಿಗೆ ಆದ್ಯತೆ
ರೋಣ: ಕ್ಷೇತ್ರ ವ್ಯಾಪ್ತಿಯ ಪ್ರತಿ ಹಳ್ಳಿಗಳ ಮುಖ್ಯ ಮತ್ತು ಒಳ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಭಾನುವಾರ ತಾಲೂಕಿನ ಯರೇ ಕುರಬನಾಳ ಗ್ರಾಮದಲ್ಲಿ 2013-14ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆಯ ಕ್ರೋಡೀಕರಿಸಿದ(ಎಸ್‌ಸಿಪಿ) ಅನುದಾನದಲ್ಲಿ ರು. 10 ಲಕ್ಷಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗ್ರಾಪಂ ಸದಸ್ಯ ಯಮನೂರಸಾಬ್ ನದಾಫ್ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮದ ವತಿಯಿಂದ ಶಾಸಕ ಜಿ.ಎಸ್. ಪಾಟೀಲರನ್ನು ಸನ್ಮಾನಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಹುವನಗೌಡ ಗೌಡರ, ಹಿರಿಯ ನ್ಯಾಯವಾದಿ ವಿ.ಆರ್. ಗುಡಿಸಾಗರ, ಪ್ರಭು ಮೇಟಿ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ, ಎಸ್.ಎ. ಗಾಣಿಗೇರ, ಅಮೃತಗೌಡ ಗೌಡರ, ಮಲ್ಲಪ್ಪ ಬಿಳೇಕಲ್ಲ, ಶರಣಪ್ಪ ಮೇಟಿ, ಇಸ್ಮಾಯಿಲ್ ಹೋರಪೇಟಿ, ಶಂಕ್ರಪ್ಪ ತಾಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಪಡಿಯಪ್ಪ ಪೂಜಾರ ಸ್ವಾಗತಿಸಿದರು. ನಿರೂಪಿಸಿದರು. ಲೋಕೇಶ ಜಡದಾರಿ ವಂದಿಸಿದರು.
ಇಂದು ಪುಟ್ಟರಾಜ ಶ್ರೀಗಳ ಜಯಂತ್ಯುತ್ಸವ
ಗದಗ: ನಗರದ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಕಲಾಭವನದಲ್ಲಿ ಮಾ. 3ರಂದು ಸಂಜೆ 5ಕ್ಕೆ ಲಿಂ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 100ನೇ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ. ಹೊಸಳ್ಳಿ ಬೂದೀಶ್ವರ ಸಂಸ್ಥಾನಮಠದ ಬೂದೀಶ್ವರ ಶ್ರೀಗಳು, ಬಳಗಾನೂರಿನ ಶಿವಶಾಂತವೀರ ಶ್ರೀಗಳು ಸಾನ್ನಿಧ್ಯ ವಹಿಸುವರು. ಅಡ್ನೂರು ದಾಸೋಹ ಮಠದ ಪಂಚಾಕ್ಷರಿ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಮ್ಮುಖ ವಹಿಸುವರು. ಅತಿಥಿಗಳಾಗಿ ಡಿಸಿ ಎನ್.ಎಸ್. ಪ್ರಸನ್ನಕುಮಾರ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಸಿಇಒ ವೀರಣ್ಣ ತುರಮರಿ ಆಗಮಿಸುವರು. ಡಾ. ಶರಣಬಸವ ವೆಂಕಟಾಪುರ ಅವರಿಂದ ಉಪನ್ಯಾಸ ಜರುಗಲಿದೆ. ರಾತ್ರಿ 9ಕ್ಕೆ ಡಾ. ಪಂಡಿತ ಪುಟ್ಟರಾಜ ಕವಿಗವಾಯಿಗಳವರ ಶಿಷ್ಯ-ಪ್ರಶಿಷ್ಯರಿಂದ ವಿಶೇಷ ಕೀರ್ತನ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿವೆ ಎಂದು ಸಂಘಟಿಕರು ತಿಳಿಸಿದ್ದಾರೆ.
ಇಂದು ತೀರ್ಥಂಕರರ 12ನೇ ವಾರ್ಷಿಕ ಪೂಜಾ ಮಹೋತ್ಸವ
ರೋಣ: ಭಗವಾನ್ ಶ್ರೀ 1008 ಪಾರ್ಶ್ವನಾಥ ತೀರ್ಥಂಕರರ ಹಾಗೂ 24 ತೀರ್ಥಂಕರರ 12ನೇ ವಾರ್ಷಿಕ ಪೂಜಾ ಮಹೋತ್ಸವ ಪಟ್ಟಣದ ಜಿನಮಂದಿರದಲ್ಲಿ ಮಾ. 3ರ ಮಧ್ಯಾಹ್ನ 3ಕ್ಕೆ ಜರುಗಲಿದೆ.
ಶಿವಮೊಗ್ಗ ಜಿಲ್ಲೆಯ ಹೊಂಬುಜ ಶ್ರೀಕ್ಷೇತ್ರದ ಮದತಿಶಯ ಸಂಸ್ಥಾನಮಠದ ಶ್ರೀಮದ್ ಅಭಿನವ ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಶ್ರೀಗಳು, ರೋಣ ಗುಲಗಂಜಿ ಮಠದ ಗುರುಪಾಪ ಶ್ರೀಗಳು ಸಾನ್ನಿಧ್ಯ ವಹಿಸುವರು.
ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸುವರು. ತಹಸೀಲ್ದಾರ್ ಅಭಯಕುಮಾರ ಪಂಡಿತ ಉದ್ಘಾಟಿಸುವರು.
ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಉಪಾಧ್ಯಕ್ಷೆ ಲಕ್ಷ್ಮಿ ಗಡಗಿ, ಸಿ.ಕೆ. ಸುಂಕದ, ಶಿವಪ್ಪ ಪಲ್ಲೇದ, ಹುಚ್ಚಪ್ಪ ನವಲಗುಂದ, ಬೋಜರಾಜ ನಾವಳ್ಳಿ, ಡಿ.ಎಂ. ಜೂಜಿನ ಮುಂತಾದವರು ಉಪಸ್ಥಿತರಿರುವರು ಎಂದು ಶ್ರೀ 1008 ಪಾರ್ಶ್ವನಾಥ ದಿಗಂಬರ ಜೈನ್ ಮಂದಿರ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎನ್.ಡಿ. ಮುತ್ತಿನ ತಿಳಿಸಿದ್ದಾರೆ.
ಗಜೇಂದ್ರಗಡ: ಇಂದು ಸಾಮೂಹಿಕ ವಿವಾಹ ಕಾರ್ಯಕ್ರಮ
ಗಜೇಂದ್ರಗಡ: ಕರ್ನಾಟಕ ಜನಹಿತ ವೇದಿಕೆ ಉದ್ಘಾಟನೆ ಹಾಗೂ ಪಂಡಿತ ಡಾ. ಪುಟ್ಟರಾಜ ಕವಿ ಗವಾಯಿಗಳವರ ಜನ್ಮ ಶತಮಾನೋತ್ಸವ ಪ್ರಯುಕ್ತ ಸಾಮೂಹಿಕ ವಿವಾಹ  ಸಮಾರಂಭ ಮಾ. 3ರಂದು ಮಧ್ಯಾಹ್ನ 12.45ಕ್ಕೆ ಪಟ್ಟಣದ ಎಪಿಎಂಸಿ ಬಳಿ ಹಮ್ಮಿಕೊಳ್ಳಲಾಗಿದೆ.
ಬಸವಕೇಂದ್ರ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು, ಮೈಸೂರು ಸಂಸ್ಥಾನ ಮಠದ ವಿಜಯ ಮಹಾಂತ ಶ್ರೀಗಳು, ಕಾಗಿನೆಲೆ ಸಂಸ್ಥಾನ ಮಠದ ಸಿದ್ಧರಾಮನಂದಪುರಿ ಶ್ರೀಗಳು, ರೇವಣ ಸಿದ್ಧೇಶ್ವರ ಸಂಸ್ಥಾನಮಠ ಮನಸೂರಿನ ಬಸವರಾಜ ದೇವರು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ತೂಬಿನಕಟ್ಟಿ ಸಂಸ್ಥಾನಮಠದ ಅಮರೇಶ್ವರಗುರು ಗಜದಂಡ ಶಿವಾಚಾರ್ಯ ಶ್ರೀಗಳು, ಬೊರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ವೀರ ಸಂಗಮೇಶ್ವರ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸುವರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕನ್ನಡ ಚಳವಳಿ ಹೋರಾಟಗಾರ ವಾಟಾಳ ನಾಗರಾಜ, ಚಿತ್ರನಟ ವಿಜಯ ರಾಘವೇಂದ್ರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಹಾಲಪ್ಪ ಆಚಾರ, ಮಾಜಿ ಸಚಿವ ಕೆ.ಜಿ. ಬಂಡಿ, ಶಾಸಕ ಜಿ.ಎಸ್. ಪಾಟೀಲ, ದೊಡ್ಡನಗೌಡ ಪಾಟೀಲ ಮುಂತಾದವರು ಪಾಲ್ಗೊಳ್ಳುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement