ಸ್ಥಿರಾಸ್ತಿಗಳ ನೋಂದಣಿ ಅಧಿಕಾರ ತಡೆ ತೆರವುಗೊಳಿಸುವಂತೆ ಮನವಿ
ಗದಗ: ಜಿಲ್ಲೆಯ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳ ಹಾಗೂ ಡಿಜಿಟಲ್ ಸಹಿ ಪದ್ಧತಿ ಅನುಷ್ಠಾನ ಮಾಡುವವರೆಗೆ ಪಂಚಾಯಿತಿಗಳ ಸ್ಥಿರಾಸ್ತಿಗಳ ನೋಂದಣಿ ಅಧಿಕಾರಕ್ಕೆ ತಡೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಈಚೆಗೆ ಜಿಲ್ಲಾಧಿಕಾರಿಗೆ ಮಹೇಶ ಕರಿಬಿಷ್ಠ ಮನವಿ ಸಲ್ಲಿಸಿದರು. ಗದಗ ತಾಲೂಕಿನಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳು, ಬೈಲಜಾಗೆ ಮನೆ, ಹಿತ್ಲ ಜಾಗಾ ವಗೈರೆಗಳನ್ನು ನೋಂದಣಿ ಅಧಿಕಾರಕ್ಕೆ ಖರೀದಿ ಪತ್ರ, ಹಕ್ಕುಬಿಟ್ಟ ಪತ್ರ ವಗೈರೆಗಳನ್ನು ನೋಂದಣಿಗೆ ತಡೆಹಿಡಿದಿದ್ದಾರೆ. ಇತ್ತೀಚಿನ ನೋಂದಣಿ ಮಹಾಪರೀವಿಕ್ಷಕರು ಬೆಂಗಳೂರು ಇವರ ಆದೇಶದ ಮೇರೆಗೆ ಸದರ ಆಸ್ತಿಗಳ ನೋಂದಣಿಗೆ ಹಾಜರಪಡಿಸುವಾಗ ನಮೂನೆ 9, 11ಎ ಮತ್ತು 11 ಜಿ ಗಳನ್ನು ಪಂಚಾಯ್ತಿಯಿಂದ ತರಬೇಕು ಹಾಗೂ ಪಿಡಿಒ ಅವರಿಂದ ಡಿಜಿಟಲ್ ಸಹಿ ಮಾಡಲ್ಪಟ್ಟಿರಬೇಕು ಎಂದು ತಿಳಿಸಿದೆ. ಆದರೆ, ಗದಗ ತಾಲೂಕಿನಲ್ಲಿಯ ಗ್ರಾಪಂ ವ್ಯಾಪ್ತಿಯ ಪಿಡಿಒ ಅವರಲ್ಲಿ ಮೇಲ್ಕಂಡ ಫಾರ್ಮಗಳು ವ ಡಿಜಿಟಲ್ ಸಹಿ ಗಣಕೀರಣದಲ್ಲಿ ಅಳವಡಿಸಿರುವುದಿಲ್ಲ. ಇದರಿಂದ ಎಲ್ಲ ಗ್ರಾಮಸ್ಥರಿಗೆ ಖರೀದಿ ವಗೈರೆ ಮಾಡುವುದು ತುಂಬಾ ತೊಂದರೆ ಉಂಟಾಗಿದೆ. ಕಾರಣ ಗ್ರಾಪಂಗಳಲ್ಲಿ ಆಸ್ತಿಗಳ ಗಣಕೀರಣ ಹಾಗೂ ಡಿಜಿಟಲ್ ಸಹಿ ಪದ್ಧತಿ ಅನುಷ್ಠಾನ ಮಾಡುವವರೆಗೆ ಈಗಿನ ಯಥಾಸ್ಥಿತಿ ಪ್ರಕಾರ ಖರೀದಿ ದಸ್ತಾವೇಜಗಳನ್ನು ಮಾಡಬೇಕಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭಕ್ಷಿ ನದಾಫ, ಮಲ್ಲಪ್ಪ ಪಲ್ಲೇದ ಮುಂತಾದವರು ಉಪಸ್ಥಿತರಿದ್ದರು.