6ರಿಂದ ಡಿವೈಎಫ್‌ಐ 10ನೇ ರಾಜ್ಯಸಮ್ಮೇಳನ: ಭರತ್‌ರಾಜ
ಕನ್ನಡಪ್ರಭ ವಾರ್ತೆ, ಗದಗ, ಮಾ. 3
ಭಾರತದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ ಹಾಗೂ ಅಸಮಾನತೆ ಮತ್ತು ಸಂಕುಚಿತ ಮನೋಭಾವ ಹೆಚ್ಚಾಗಿ ಕೋಮು ಸೌಹಾರ್ದತೆಗೆ ಧಕ್ಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಯೋಗಧಾರಿತ ಅಭಿವೃದ್ಧಿ ಅಸಮಾನತೆಯ ವಿರುದ್ಧ ಹಾಗೂ ಸಾಮರಸ್ಯಕ್ಕಾಗಿ ಡಿವೈಎಫ್‌ಐನ 10ನೇ ರಾಜ್ಯ ಸಮ್ಮೇಳನವು ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಮಾ. 6ರಿಂದ 8ರ ವರೆಗೆ ನಡೆಯಲಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಎನ್.ಎಲ್. ಭರತ್‌ರಾಜ ಹೇಳಿದರು.
ಅವರು ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರ ಪರಿಸ್ಥಿತಿಯತ್ತ ಸಾಗುತ್ತಿದೆ. ದುಡಿದ ಜನಕ್ಕೆ ಹೊಟ್ಟೆಗೆ ಅನ್ನವಿರಲಿ, ಕುಡಿಯಲು ನೀರೂ ದೊರೆಯದಾಗಿದೆ. ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಎಲ್ಲ ಬಡವರಿಗಾಗಿ ನಿವೇಶನ, ವಸತಿಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸಮರ್ಪಕ ವೈದ್ಯಕೀಯ ಸೌಲಭ್ಯ ಹಾಗೂ ಇತರ ಮೂಲ ಸಮಸ್ಯೆಗಳಿಗೆ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ನೆಲ್ಸಲ್ ಮಂಡೇಲಾ ನಗರ, ಅಬ್ದುಲ್‌ರಜಾಕ ಮುಲ್ಲಾ ದ್ವಾರ, ಎಸ್. ಶಿವರಾಮ ವೇದಿಕೆ ಹಾಗೂ ಡಾ. ಜಿ.ಎಸ್. ಶಿವರುದ್ರಪ್ಪ ಸಭಾಂಗಣ ಎಂಬ ಹೆಸರಿನ್ನಿಟ್ಟು ಈ ಸಮ್ಮೇಳನ ನಡೆಸಲಾಗುತ್ತಿದೆ.
ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಉಪಸ್ಥಿತಿಯಲ್ಲಿ ಮಾ. 6ರಂದು ಬೆಳಗ್ಗೆ 11.30ಕ್ಕೆ ಸಾಹಿತಿ ಕುಂ. ವೀರಭದ್ರಪ್ಪ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಡಿವೈಎಫ್‌ಐ ರಾಜ್ಯಾಧ್ಯಕ್ಷ ಎನ್.ಎಲ್. ಭರತ್‌ರಾಜ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಕೇರಳದ ಲೋಕಸಭಾ ಸದಸ್ಯ ಹಾಗೂ ಡಿವೈಎಫ್‌ಐನ ಅಖಿಲ ಭಾರತ ಅಧ್ಯಕ್ಷ ಎಂ.ಬಿ. ರಾಜೇಶ, ಅಖಿಲ ಭಾರತ ಉಪಾಧ್ಯಕ್ಷೆ ಪ್ರೀತಿ ಶೇಖರ, ಡಿವೈಎಫ್‌ಐನ ರಾಜ್ಯ ಮಾಜಿ ಕಾರ್ಯದರ್ಶಿ ಎಸ್.ವೈ. ಗುರುಶಾಂತ ಭಾಗವಹಿಸುವರು ಎಂದರು.
ಎಂ.ಎಸ್. ಹಡಪದ, ಮಹಾಗುಂಡಪ್ಪ ಅಂಗಡಿ, ಎಸ್‌ಎಫ್‌ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಪೂಜಾರ, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಬೋಸ್ಲೆ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.