ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

2 ಪ್ರತ್ಯೇಕ ಪ್ರಕರಣ: ಕಳ್ಳನ ಬಂಧನ

Mainashree
Updated On : 5 Mar 2014, 10:40 am

ಗದಗ: ಮುಂಡರಗಿಯಲ್ಲಿ ಕೀಲಿ ಹಾಕಿದ ಮನೆಗಳನ್ನು ಹಾಡು ಹಗಲೆ ದೋಚುತ್ತಿದ್ದ, ಮನೆಗಳ್ಳತನ ಆರೋಪಿಯನ್ನು ಬಂಧಿಸಿ, ಬಂಧಿತನಿಂದ ರು. 2 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಮುಂಡರಗಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ ಅ. 4ರಂದು ಮುಂಡರಗಿ ಪಟ್ಟಣದ ಹಾಲವ್ವ ಚಂದ್ರಾನಾಯ್ಕ ಎನ್ನುವರ ಮನೆಯ ಕೀಲಿ ಮುರಿದು ಟ್ರಿಜುರಿಯಲ್ಲಿದ್ದ ರು. 70 ಸಾವಿರ ಮೌಲ್ಯದ ಚಿನ್ನದ ಮಂಗಲಸೂತ್ರ, ರು. 10 ಸಾವಿರ ಮೌಲ್ಯದ ಒಂದು ಜತೆ ಕಿವಿ ಓಲೆ, ರು. 5 ಸಾವಿರ ಮೌಲ್ಯದ ಉಂಗುರು, 15 ತೊಲೆ ತೂಕದ ಬೆಳ್ಳಿ ಲಾಲು ಚೈನ್‌ಗಳು ಹಾಗೂ ರು. 25 ಸಾವಿರ ನಗದು ದೋಚಿ ಪರಾರಿಯಾದ ಪ್ರಕರಣ ಹಾಗೂ ಕಳೆದ ಫೆ. 25ರಂದು ಪಟ್ಟಣದ ಸುರೇಶ ಗೂಳಪ್ಪ ವಕ್ಕಳದ ಎನ್ನುವರ ಕೀಲಿ ಹಾಕಿದ ಮನೆಯ, ಅಡುಗೆ ಮನೆಯ ಹೊಗೆ ಕಿಂಡಿ ಮೂಲಕ ಮನೆಯೊಳಗೆ ಇಳಿದು ರು. 1 ಲಕ್ಷ 25 ಸಾವಿರ  ಮೌಲ್ಯದ 50 ಗ್ರಾಂ ಚಿನ್ನಾಭರಣ ಹಾಗೂ ರು. 40 ಸಾವಿರ ನಗದು ದೋಚಿದ ಪ್ರಕರಣ ವರದಿಯಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾದ ವಿಶೇಷ ತಂಡ ಆರೋಪಿತರ ಬಗ್ಗೆ ಮಾಹಿತಿ ಸಂಗ್ರಹಿಸಿ ಮಂಗಳವಾರ ಬೆಳಗಿನ ಜಾವ ಗಸ್ತು ಕರ್ತವ್ಯದಲ್ಲಿದ್ದ ಮುಂಡರಗಿ ಸಿಪಿಐ ಶ್ರೀಪಾದ ಜಲ್ದೆ ನೇತೃತ್ವದ ತಂಡ ಆರೋಪಿ ಮಾಬುಸಾಬ್ ಹುಸೇನಸಾಬ್ ಚೋರಗಸ್ತಿ ಹಾಗೂ ಇತನೊಂದಿಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 2 ಪ್ರಕರಣ ತಾವು ನಡೆಸಿರುವುದಾಗಿ ಒಪ್ಪಿಕೊಂಡಿದ್ದು, ಪತ್ತೆ ಕಾರ್ಯಕ್ಕೆ ಶ್ರಮಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯವನ್ನು ಪ್ರಶಂಸಿಸುವುದಾಗಿ ತಿಳಿಸಿ ಇಲಾಖೆ ವತಿಯಿಂದ ಬಹುಮಾನ ಘೋಷಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಡಿವೈಎಸ್‌ಪಿ ವಿಜಯ ಡಂಬಳ, ಸಿಪಿಐ ಶ್ರೀಪಾದ ಜಲ್ದೆ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement