ಜೆಡಿಎಸ್ ಜಿಲ್ಲಾ ಅಧ್ಯಕ್ಷರಾಗಿ ಕುರ್ತಕೋಟಿಮಠ ಆಯ್ಕೆ
ಗದಗ: ಜೆಡಿಎಸ್ ಪಕ್ಷದ ಗದಗ ಜಿಲ್ಲಾ ಅಧ್ಯಕ್ಷರನ್ನಾಗಿ ಅಂದಾನಯ್ಯ ಕುರ್ತಕೋಟಿಮಠ ಅವರನ್ನು ಆಯ್ಕೆ ಮಾಡಿ ಜೆಡಿಎಸ್ ರಾಜ್ಯ ಅಧ್ಯಕ್ಷ ಎ.ಕೃಷ್ಣಪ್ಪ ಘೋಷಿಸಿದರು.
ಅವರು ಸೋಮವಾರ ನಗರದ ಜೆಡಿಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಈ ಕುರಿತು ಘೋಷಿಸಿದರು. ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಗೌರವಿಸಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಬೇರೆ ಬೇರೆ ಪಕ್ಷದವರನ್ನು ಮಣೆ ಹಾಕಿ ವಲಸಿಗರನ್ನು ಅಧ್ಯಕ್ಷರನ್ನು ಮಾಡಲಾಗಿತ್ತು. ಈ ಸಂಸ್ಕೃತಿಗೆ ತಿಲಾಂಜಲಿ ಇಟ್ಟು ನಿಷ್ಠಾವಂತರನ್ನು ಈ ಬಾರಿ ಆಯ್ಕೆ ಮಾಡಲಾಗಿದೆ ಎಂದರು.
ರಾಜ್ಯ ಮಹಿಳಾ ಅಧ್ಯಕ್ಷೆ ಶೀಲಾ ನಾಯಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಗದಗ ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ನಜೀರ ಡಂಬಳ, ಜಿಲ್ಲಾ ಮಹಿಳಾ ಅಧ್ಯಕ್ಷೆ ಪುಷ್ಪಲತಾ ಮಾಡಲಗೇರಿ, ಬಿ.ಎಸ್. ಹಿರೇಗೌಡ್ರ, ಬಿ.ಎಸ್. ದೇಸಾಯಿ, ದಾವಲ ಮುಳಗುಂದ, ಎಂ.ಜಿ. ವಡ್ಡಟ್ಟಿ, ವೆಂಕರಡ್ಡಿ ಹೂಲಿ, ಜಿಲ್ಲಾ ಯುವ ಅಧ್ಯಕ್ಷ ರಮೇಶ ಕಲಬುರ್ಗಿ, ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಭುರಾಜಗೌಡ ಪಾಟೀಲ, ಮಲ್ಲು ಗೊಲ್ಲರ, ಎಚ್.ಆರ್. ಕಲ್ಮನಿ, ಶಿವರಾಜ ಹಿರೇಮನಿಪಾಟೀಲ, ಇಮಾಮ ಚಿನ್ನೂರ, ಶಿವಾಜಿ, ಅಂಬಾಜಿ ದಹಿಂಡೆ, ಉಮೇಶ ಮಲ್ಲಾಪುರ, ರಾಜು ನದಾಫ್, ಜಾವೇದ ನೂರಬಾಷಾ, ಅಬ್ದುಲ್ ನರಸಾಪುರ, ರಫೀಕ ನರಗುಂದ, ಉಮೇಶ ಹಿರೇಗೌಡ್ರ, ಖಾದರ ನರಗುಂದ, ಭೀಮಪ್ಪ ಹದ್ದಣ್ಣವರ ಮುಂತಾದವರು ಉಪಸ್ಥಿತರಿದ್ದರು.