ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸದಸ್ಯೆ ಮನೆ ಮುಂದೆ 'ಕೈ' ಕಾರ್ಯಕರ್ತರು ಧರಣಿ

Mainashree
Updated On : 7 Mar 2014, 10:26 am

ನರಗುಂದ: ಪಟ್ಟಣದ 21ನೇ ವಾರ್ಡ್‌ನ ಹಾಲಭಾವಿ ಕೆರೆಯ ನಿವಾಸಿಗಳು ತಮ್ಮ ಪುರಸಭೆ ವಾರ್ಡ್‌ನ ಸದಸ್ಯೆ ಜ್ಯೋತಿ ಪತ್ರಿವನ ಮನೆ ಮುಂದೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವರೆಗೆ ಚುನಾವಣೆಯಲ್ಲಿ ಮತದಾನ ಮಾಡಬಾರದೆಂದು ಕಾಂಗ್ರೆಸ್ ಕಾರ್ಯರ್ತರು ಗುರುವಾರ ರಾತ್ರಿ ಧರಣಿ ಮಾಡಿದರು.
ಅವರು ಪಟ್ಟಣದ ವಿನಾಯಕ ನಗರದ ಪುರಸಭೆ ಸದಸ್ಯ ಜ್ಯೋತಿ ಪತ್ರಿವನ ಮನೆ ಮುಂದೆ ಗುರುವಾರ 21 ವಾರ್ಡಿನ ಹಾಲಭಾವಿ ನಿವಾಸಿಗಳು ಸೇರಿ ಸದಸ್ಯ ಮನೆಯ ಮುಂದೆ ಜಮಾಯಿಸಿ ನಮ್ಮ ಹಾಲಭಾವಿ ಕೆರೆಯಲ್ಲಿ 30 ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಇಲ್ಲಿವರೆಗೂ ನಮಗೆ ಹಕ್ಕುಪತ್ರ ನೀಡಿಲ್ಲ. ಅದಕ್ಕೆ ಮಾ. 7ರ ಜರುಗುವ ಪುರಸಭೆಯ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಬಾರದು, ನೀವು ನಾವು ಸೇರಿಕೊಂಡು ಶಾಸಕ ಬಿ.ಆರ್. ಯಾವಗಲ್ಲವರಿಗೆ ಮನವಿ ಪತ್ರಿ ನೀಡಿ ಶಾಸಕರು ನಮ್ಮ ಬೇಡಿಕೆಗಳಿಗೆ ಭರವಸೆ ನೀಡಿದರೆ ಮಾತ್ರ ನೀವು ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಬೇಕೆಂದು ಸದಸ್ಯ ಮನೆ ಮುಂದೆ ಧರಣಿ ಕುಳಿತಿರುವುದಾಗಿ ತಿಳಿಸಿದರು. ಆದರೆ, ಈ ಧರಣಿ ಪ್ರಾರಂಭ ಆದ ಸಂದರ್ಭದಲ್ಲಿ ಸದಸ್ಯ ಜ್ಯೋತಿ ಪತ್ರಿ ಮನೆಯಲ್ಲಿ ಇಲ್ಲದ್ದರಿಂದ 21 ವಾರ್ಡ್‌ನ ನಿವಾಸಿಗಳು ಸದಸ್ಯರು ಬರುವವರೆಗೂ ಧರಣಿ ಮುಂದುವರಿಸುತ್ತೇವೆಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement