ಇಂದು ಜನಪದ ಸಾಹಿತ್ಯ ಉಪನ್ಯಾಸ
ಗದಗ: ಮಾ. 8ರ ಸಂಜೆ 6ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ತಾಲೂಕು ಪಂಚಾಯಿತಿ ಆವರಣದಲ್ಲಿ ಸಾಹಿತ್ಯ ಸಂಜೆ ಮಾಲಿಕೆ ಕಾರ್ಯಕ್ರಮ ಜರುಗಲಿದೆ. ನಿಡಗುಂದಿಯ ಎಸ್.ಎ. ಪ್ರೌಢಶಾಲೆ ಶಿಕ್ಷಕ ಸುರೇಶ ಹಳ್ಳಿಕೇರಿ ಜನಪದ ಸಾಹಿತ್ಯದ ಕುರಿತು ಉಪನ್ಯಾಸ ನೀಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಮ. ಕುರಿ ಅಧ್ಯಕ್ಷತೆ ವಹಿಸುವರು ಎಂದು ಶನಿವಾರ ಸಾಹಿತ್ಯ ಸಂಜೆಯ ಸಂಚಾಲಕ ಮಲ್ಲೇಶ ಡಿ.ಎಚ್., ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ
ಗದಗ: ಗೌತಮ ಬುದ್ಧ ಸೇವಾ ಸಮಿತಿ, ದಲಿತ ಯುವಸೇನಾ ಸಮಿತಿ (ರಿ) ಗದಗ ಯುವ ಸಬಲೀಕರಣ ಕ್ರೀಡಾ ಇಲಾಖೆ ಗದಗ, ರಾಜೀವ್ ಗಾಂಧಿ ಯುವಕ ಮಂಡಳ ಗದಗ, ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ. ಡಾ. ಸುಭಾಸ ಭರಣಿ ಅಭಿಮಾನಿ ಬಳಗ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಗದಗ ಚಲವಾದಿ ಮಹಾಸಭಾ ಗದಗ ರಾಜೀವ್ ಗಾಂಧಿ ನಗರ ಆಶ್ರಯದಲ್ಲಿ ಮಾ. 8 ಹಾಗೂ 9ರಂದು ಮಧ್ಯಾಹ್ನ 2ಕ್ಕೆ ಸರ್ಕಾರಿ ಶಾಲೆ. ನಂ. 8ರ ವಾರ್ಷಿಕೋತ್ಸವ ಅಂಗವಾಗಿ ಜ. ತೋ. ಡಾ. ಸಿದ್ದಲಿಂಗ ಶ್ರೀ ಟ್ರೋಫಿ- 2014 ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಸನ್ಮಾನ, ಸಾಂಸ್ಕೃತಿಕ ಸಮಾರಂಭ ಆಯೋಜಿಸಲಾಗಿದೆ. ಕಲ್ಲಯ್ಯಜ್ಜನವರು ಸಮಾರಂಭದ ಸಾನ್ನಿಧ್ಯ ವಹಿಸುವರು. ಉಪ ಪೊಲೀಸ್ ಅಧಿಕ್ಷಕ ವಿಜಯ ಡಂಬಳ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸುವರು. ದಲಿತ ಯುವಸೇನಾ ಸಮಿತಿ ಗದಗ ಅಧ್ಯಕ್ಷ ವಿಜಯ್ ಮುಳಗುಂದ ಅಧ್ಯಕ್ಷತೆ ವಹಿಸುವರು.