ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರತಿ ವಾರ್ಡ್ನ ರಸ್ತೆ ಅಭಿವೃದ್ಧಿಗೆ ಆದ್ಯತೆ: ಮುತ್ತಣ್ಣ

Rashmi Kasaragodu
Updated On : 8 Mar 2014, 12:24 pm

ಕನ್ನಡಪ್ರಭ ವಾರ್ತೆ, ರೋಣ, ಮಾ. 7
ಪುರಸಭೆ ವ್ಯಾಪ್ತಿಯ ಕಷ್ಣಾಪುರ ಸೇರಿ 23 ವಾರ್ಡ್ಗಳ ಪ್ರತಿಯೊಂದು ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಓಣಿಯ ಜನತೆ ಸಹಕಾರ ಅತಿ ಮುಖ್ಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ ಹೇಳಿದರು.
ಈಚೆಗೆ ಪಟ್ಟಣದ 10ನೇ ವಾರ್ಡ್ನ ಬಾಬು ಜಗಜೀವನ ರಾಮ್ ನಗರದಲ್ಲಿ 2013-14ನೇ ಸಾಲಿನ ಕೊಳಚೆ ನಿರ್ಮೂಲನಾ ಪ್ರದೇಶ ಯೋಜನೆ ಅನುದಾನದಲ್ಲಿ ರು. 18 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಟ್ಟಣದ ಸಮಗ್ರ ಅಭಿವೃದ್ಧಿಯನ್ನು ರಾಜ್ಯ ಹಣಕಾಸು ಆಯೋಗದ ಅನುದಾನ, ಮುಖ್ಯಮಂತ್ರಿಗಳ ಸಣ್ಣ ಮತ್ತು ದೊಡ್ಡ ಪಟ್ಟಣಗಳ ಅಭಿವೃದ್ಧಿ ಅನುದಾನ, ಎಸ್ಸಿ, ಎಸ್ಟಿ ಪಂಗಡಗಳ ಕಾಲೋನಿ ಅಭಿವೃದ್ಧಿ ಅನುದಾನ ಹಾಗೂ ನಗರೋತ್ಥಾನ ಯೋಜನೆಗಳ ಮೂಲಕ ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯಗಳ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗುವುದು. ಜತೆಗೆ ಪುರಸಭೆಯಿಂದ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಮಾತನಾಡಿ, ಪಟ್ಟಣದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ವಾಸಿಸುವ ವಾರ್ಡ್ಗಳನ್ನು ಗುರುತಿಸಿ ವಿಶೇಷ ಅನುದಾನ ವ್ಯವಸ್ಥೆ ಕಲ್ಪಿಸಬೇಕು. ಹಿಂದುಳಿದ ಜನಾಂಗಗಳ ಅಭಿವೃದ್ಧಿಗೆ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಜನಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದರು. ಸದಸ್ಯ ಖಾದೀರಸಾಬ ಸಂಕನೂರ, ಗಂಗಮ್ಮ ಹಾದಿಮನಿ, ಮೌನೇಶ ಹಾದಿಮನಿ, ಮುತ್ತಣ್ಣ ಜೋಗಣ್ಣವರ, ಫಕೀರಪ್ಪ ತೆಗ್ಗಿನಮನಿ, ರಮೇಶ ಹಲಗಿ, ರಾಮು ಜೋಗಣ್ಣವರ, ಶಂಕ್ರಪ್ಪ ಹವಳಪ್ಪನವರ, ಲೋಕಪ್ಪ ನವಲಗುಂದ, ಮಲ್ಲು ಗಾಣಿಗೇರ ಮುಂತಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement