ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮುಂಡರಗಿ ಪುರಸಭೆಗೆ ಭಾರತಿ, ಸೋಮನಗೌಡ ಅಧ್ಯಕ್ಷೆ, ಉಪಾಧ್ಯಕ್ಷ

Rashmi Kasaragodu
Updated On : 8 Mar 2014, 12:23 pm

ಮುಂಡರಗಿ: ಮುಂಡರಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಜರುಗಿತು. ಪುರಸಭೆ ನೂತನ ಅಧ್ಯಕ್ಷರಾಗಿ 20ನೇ ವಾರ್ಡ್ನ ಸದಸ್ಯರಾದ ಭಾರತಿ ಹಕ್ಕಿ, ಉಪಾಧ್ಯಕ್ಷರಾಗಿ 12ನೇ ವಾರ್ಡ್ನ ಸದಸ್ಯ ಸೋಮನಗೌಡ ಗೌಡ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ಬೆಳಗ್ಗೆ 10-30ಕ್ಕೆ ಪ್ರಾರಂಭವಾದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹುದ್ದೆಗಾಗಿ ಮೀಸಲಾಗಿದ್ದ ಎಸ್ಟಿ ಮಹಿಳೆ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿದ್ದ ಭಾರತಿ ಹಕ್ಕಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಸೋಮನಗೌಡ ಗೌಡ್ರ ಹಾಗೂ ಬಿಜೆಪಿಯ ಸುರೇಶ ಮಾಳಕೊಪ್ಪ ನಾಮಪತ್ರ ಸಲ್ಲಿಸಿದ್ದರು.
ನಂತರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಸುರೇಶ ಮಾಳೆಕೊಪ್ಪ ತಮ್ಮ ನಾಮಪತ್ರ ವಾಪಾಸ್ ಪಡೆದರು. ಪೈಪೋಟಿ ಇಲ್ಲದ ಕಾರಣ ಚುನಾವಣಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಎಸ್.ಆರ್. ಶಿರಕೋಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ಈ ಸಂದರ್ಭದಲ್ಲಿ ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಉಪಸ್ಥಿತರಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಫಕ್ರುಸಾಬ್ ಹಾರೋಗೇರಿ, ಚಂದ್ರಶೇಖರ ಬಡಿಗೇರ, ಮುದುಕಪ್ಪ ಕುಂಬಾರ, ಬಸವರಾಜ ರಾಮೇನಹಳ್ಳಿ, ದಾನೇಶ್ವರಿ ಭಜಂತ್ರಿ, ರಾಘವೇಂದ್ರ ಕುರಿಯವರ, ಬಸವರಾಜ ಗಣಾಚಾರಿ, ವೀರೇಶ ಸಜ್ಜನರ, ಪ್ರೇಮವ್ವ ಗಣದಿನ್ನಿ, ಲಿಂಗರಾಜಗೌಡ ಪಾಟೀಲ, ಕೊಟ್ರಮ್ಮ ಇಟಗಿ, ಸುರೇಶ ಮಾಳೆಕೊಪ್ಪ, ಪರಶುರಾಮ ಕರಡಿಕೊಳ್ಳ, ಶಾಂತವ್ವ ಬಳ್ಳಾರಿ, ಶಂಕರಗೌಡ ಪಾಟೀಲ, ರೇಖಾ ದೇಸಾಯಿ, ಪ್ರಭು ಅಬ್ಬಿಗೇರಿ, ಹೇಮಾವತಿ ಅಬ್ಬಿಗೇರಿ, ಬಸವರಾಜ ನೆರೇಗಲ್, ಶಾರದಾ ದೇಸಾಯಿ, ರೀಹಾನಾಬೇಗಂ ಕೆಲೂರ ಮುಂತಾದವರು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ರಮೇಶ ಸುಣಗಾರ ಹಾಗೂ ಪುರಸಭೆ ಮತ್ತು ಚುನಾವಣಾ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement