ಇಂದು ರಾಣಿ ಚನ್ನಮ್ಮ ವಿಜಯೋತ್ಸವ
ಹೊಳೆಆಲೂರು: ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಯುವ ಘಟಕ ಹೊಳೆಆಲೂರು ಉದ್ಘಾಟನೆ ಮತ್ತು 190ನೇ ರಾಣಿ ಚನ್ನಮ್ಮ ವಿಜಯೋತ್ಸವ ಮೆರವಣಿಗೆ ಹಾಗೂ ಬೃಹತ್ ಸಮಾವೇಶ ಮಾ. 10ರಂದು ಬೆಳಗ್ಗೆ 9ಕ್ಕೆ ಗ್ರಾಮದ ಯಚ್ಚರೇಶ್ವರ ಮಠದ ಆವರಣದಲ್ಲಿ ಜರುಗಲಿದೆ. ಗ್ರಾಪಂ ಉಪಾಧ್ಯಕ್ಷ ಜಗದೀಶ ಬ್ಯಾಡಗಿ ಮೆರವಣಿಗೆಯ ಉದ್ಘಾಟಿಸಲಿದ್ದು, ಕೂಡಲಸಂಗಮ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಶ್ರೀಗಳು, ಯಚ್ಚರೇಶ್ವರ ಶ್ರೀಗಳು, ಎ.ಪಿ. ಪಾಟೀಲ ಗುರೂಜಿ ಸಾನ್ನಿಧ್ಯ ವಹಿಸುವರು. ಬೆಳಗ್ಗೆ 11ಕ್ಕೆ ಸಮಾವೇಶ ಜರುಗಲಿದ್ದು, ಮಾಜಿ ಸಚಿವ ಸಿ.ಸಿ. ಪಾಟೀಲ ಸಮಾವೇಶ ಉದ್ಘಾಟಿಸುವರು. ಯುವ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಕಂಠಿ ಅಧ್ಯಕ್ಷತೆ ವಹಿಸುವರು. ಆಶಯ ನುಡಿಯನ್ನು ಎನ್.ಎಸ್. ಹುಣಶಿಕಟ್ಟಿ ಪ್ರಸ್ತುತ ಪಡಿಸುವರು. ಅತಿಥಿಗಳಾಗಿ ಪ್ರಭಣ್ಣ ಹುಣಶಿಕಟ್ಟಿ, ಎಸ್.ಎಂ. ಪಾಟೀಲ, ನೀಲಕಂಠ ಅಸೂಟಿ, ಎಂ. ಬಸಪ್ಪ, ಎಂ.ಎಸ್. ಚಿನ್ನೂರ, ರಾಜಶೇಖರ ಮೆಣಸಿನಕಾಯಿ, ಶಶಿಧರ ದಿಂಡೂರ, ಎಸ್.ಎಂ. ಜಿಗಳೂರ, ಕಳಕಪ್ಪ ಬಂಡಿ, ಶ್ರೀಶೈಲಪ್ಪ ಬಿದರೂರ, ಎ.ಎಸ್. ಬೇಲಿ, ಎನ್.ಜಿ. ಪಾಟೀಲ, ಎಸ್.ಜಿ. ತೋಟದ, ಬಾಪುಗೌಡ ಜಾಲಿಹಾಳ, ವೈ.ಎನ್. ಬ್ಯಾಡಗಿ, ಎಂ.ಎನ್. ಪಾಯಪ್ಪಗೌಡರ, ಎನ್.ಎಂ. ಪಾಟೀಲ, ಸಿ.ಜಿ. ಬೀರನೂರ, ಬಸವರಾಜ ಬ್ಯಾಡಗಿ, ಬಸವರಾಜ ಬೀರನೂರ, ಎಂ.ಸಿ. ಬ್ಯಾಡಗಿ, ಬಸವರಾಜ ಅವರಾದಿ, ಎಂ.ಎನ್. ತೇಜಿಗೌಡ್ರ, ನೀಲಪ್ಪ ಅವರಾದಿ, ಎಸ್.ಎಸ್. ಪಟ್ಟಣಶೆಟ್ಟಿ, ಬಿ.ಎಚ್. ಕುರಹಟ್ಟಿ, ವೈ.ವಿ. ಜಡಮಳಿ, ಗುರಣ್ಣ ಮನಗೂಳಿ, ಗಂಗಾಧರ ಕಲ್ಲಾಪುರ, ಜಿ.ಪಿ. ಪಾಟೀಲ, ನೀಲಪ್ಪಗೌಡ್ರ ಹನುಮಂತಗೌಡ್ರ, ಶಿವಕುಮಾರ ನೀಲಗುಂದ, ಡಿ.ಎಸ್. ಪಾಟೀಲ, ಸುಭಾಸ ಹೊಸಂಗಡಿ, ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ, ಶಂಕರ ಪಾಟೀಲ ಮುನೇನಕೊಪ್ಪ, ಬಿ.ಆರ್. ಹಿರೇಗೌಡ್ರ ಮತ್ತು ಜಿ.ಬಿ. ಕೊಂಗವಾಡ ಆಗಮಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಪಡಿತರ ಚೀಟಿ ವಿತರಣೆ ತಾತ್ಕಾಲಿಕವಾಗಿ ಸ್ಥಗಿತ
ಗದಗ: ಲೋಕಸಭಾ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಮಾ. 5ರಿಂದ ಜಾರಿಯಾಗುವಂತೆ ಜಿಲ್ಲೆಯಲ್ಲಿ ಯಾವುದೇ ಹೊಸ ಆನ್ಲೈನ್ ಪಡಿತರ ಚೀಟಿಗಳ ಅರ್ಜಿಗಳ ಸ್ವೀಕೃತಿ ಕಾರ್ಯ ಮತ್ತು ಹೊಸ ಪಡಿತರ ಚೀಟಿಗಳ ವಿತರಣೆ ಕಾರ್ಯವನ್ನು ತಾತ್ಕಾಲಿಕವಾಗಿ ಮುಂದಿನ ಆದೇಶವಾಗುವ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.