ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಚುನಾವಣೆ ನೀತಿ ಸಂಹಿತೆ: ವಾಹನ, ಐಬಿ ಬಳಕೆಗೆ ನಿರ್ಬಂಧ

Lingaraj Badiger
Updated On : 10 Mar 2014, 11:12 am

ಗದಗ: ಭಾರತ ಚುನಾವಣಾ ಆಯೋಗದ ಮಾ. 5ರ ನಿರ್ದೇಶನದನ್ವಯ ಲೋಕಸಭೆ ಚುನಾವಣೆ-2014ರ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ತಕ್ಷಣದಿಂದ ಜಾರಿಗೊಂಡಿದೆ. ಆದುದರಿಂದ ಜಿಪಂ, ತಾಪಂ, ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರ, ವಿವಿಧ ನಿಗಮ ಮಂಡಳಿ, ಸಹಕಾರಿ ಸಂಘ ಮತ್ತು ಉದ್ದಿಮೆಗಳಿಗೆ ನೀಡಲಾದ ಸರ್ಕಾರಿ ವಾಹನಗಳನ್ನು ಹಿಂದಕ್ಕೆ ಪಡೆಯಲಾಗಿದೆ.
ಆಯಾ ತಾಲೂಕಿನ ತಹಸೀಲ್ದಾರರು ಈ ವಾಹನಗಳನ್ನು ಗದಗ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಒಪ್ಪಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಆದೇಶಿಸಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಎಲ್ಲ ಐಬಿ ಪ್ರವಾಸಿ ನಿರೀಕ್ಷಣಾ ಮಂದಿರ, ನಿಗಮ ಮಂಡಳಿಗಳ ಅತಿಥಿ ಗೃಹಗಳನ್ನು ಕೂಡ ತಹಸೀಲ್ದಾರರು ತಮ್ಮ ಅಧೀನಕ್ಕೆ ತೆಗೆದುಕೊಂಡು ವರದಿ ಸಲ್ಲಿಸಲು ಹಾಗೂ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಯಾರಿಗೂ ಯಾವ ಉದ್ದೇಶಕ್ಕೆ ನೀಡಬಾರದೆಂದು ಅದೇಶದಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement