ಬರದೂರ ಪ್ರೌಢಶಾಲೆ ಕೊಠಡಿ ಕಾಮಗಾರಿಗೆ ಚಾಲನೆ
ಮುಂಡರಗಿ: ತಾಲೂಕಿನ ಬರದೂರ ಗ್ರಾಮದ ಎನ್.ಎನ್. ಗೋಡಿ ಸರ್ಕಾರಿ ಪ್ರೌಢಶಾಲೆಯ ನೂತನ ಕೊಠಡಿಯ ಕಾಮಗಾರಿಗೆ ರೋಣ ಶಾಸಕ ಜಿ.ಎಸ್. ಪಾಟೀಲ ಈಚೆಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರವು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಇದರ ಲಾಭವನ್ನು ಮಕ್ಕಳು ಪಡೆದುಕೊಳ್ಳಬೇಕೆಂದರು. ಎಸ್ಡಿಎಂಸಿ ಅಧ್ಯಕ್ಷ ಈಶ್ವರಪ್ಪ ಗೋಡಿ ಅಧ್ಯಕ್ಷತೆ ವಹಿಸಿದ್ದರು. ಮಿಥುನಗೌಡ ಪಾಟೀಲ, ಎಸ್ಡಿಎಂಸಿ ಸದಸ್ಯರಾದ ಕೆಂಚಪ್ಪ ನಾಡಗೌಡ್ರ, ಮುದಕನಗೌಡ ನಾಡಗೌಡ್ರ, ನೀಲಪ್ಪ ಶಿರೋಳ, ಪ್ರಕಾಶ ಸಜ್ಜನ, ಚನ್ನಪ್ಪ ಮೇಟಿ, ಮೌಲಾಸಾಬ್ ಸೋಂಪುರ, ಈರಪ್ಪ ನಾಡಗೌಡ್ರ, ದ್ಯಾಮವ್ವ ತಳವಾರ, ದೇವಪ್ಪ ಗದಗ, ಚನ್ನಪ್ಪ ಹೊಸಮನಿ, ಕಾರ್ಯನಿರ್ವಾಹಕ ಅಧಿಕಾರಿ ಡಿ.ಮೋಹನ್, ಬಿಇಒ ಎಂ.ಎ. ರಡ್ಡೇರ ಉಪಸ್ಥಿತರಿದ್ದರು. ಶಿಕ್ಷಕ ಹಜರತನವರ ನಿರೂಪಿಸಿದರು. ಮುಖ್ಯೋಪಾಧ್ಯಾಯ ಆರ್.ಬಿ. ಮುಳ್ಳೊಳ್ಳಿ ವಂದಿಸಿದರು.