ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂತ ಶ್ರೀ ಸೇವಾಲಾಲರ ಭಾವಚಿತ್ರ ಮೆರವಣಿಗೆ

Lingaraj Badiger
Updated On : 10 Mar 2014, 11:12 am

ಗಜೇಂದ್ರಗಡ: ಸಂತ ಶ್ರೀ ಸೇವಾಲಾಲರ 275ನೇ ಜಯಂತ್ಯುತ್ಸವದ ನಿಮಿತ್ತ ರೋಣ ತಾಲೂಕು ಸಂತ ಸೇವಾಲಾಲ ಜಯಂತ್ಯುತ್ಸವ ಸಮಿತಿಯಿಂದ ಪಟ್ಟಣದಲ್ಲಿ ಸೇವಾಲಾಲರ ಭಾವಚಿತ್ರದ ಮೆರವಣಿಗೆ ಈಚೆಗೆ ನಡೆಯಿತು.
ಸ್ಥಳೀಯ ಸೇವಾಲಾಲ ದೇಗುಲದಿಂದ ಆರಂಭಗೊಂಡ ಮೆರವಣಿಗೆ ಅಂಬೇಡ್ಕರ್ ವೃತ್ತ, ದುರ್ಗಾ ವೃತ್ತ, ಹಿರೇ ಬಜಾರ, ಕೊಳ್ಳಿಯವರ ಕತ್ರಿ, ವಾಣಿಪೇಟೆ, ಜಗಜ್ಯೋತಿ ಬಸವೇಶ್ವರ ವೃತ್ತ, ಜೋಡುರಸ್ತೆ ಮೂಲಕ ಕಾಲಕಾಲೇಶ್ವರ ವೃತ್ತ ತಲುಪಿ ಮರಳಿ ಸೇವಾಲಾಲ ದೇವಸ್ಥಾನಕ್ಕೆ ತೆರಳಿತು. ಮೆರವಣಿಗೆಯಲ್ಲಿ ಲಂಬಾಣಿ ಮಹಿಳೆಯರ ನೃತ್ಯ, ಗಾಯನ, ಆಕಾಶವಾಣಿ ಕಲಾವಿದ ಲಕ್ಷ್ಮಪ್ಪ ಮಾಳೋತ್ತರ ಮತ್ತು ಸಂಗಡಿಗರ ಭಜನೆ ಜನಮನ ಸೆಳೆಯಿತು. ಲಿಂಗಸ್ಗೂರಿನ ವಿಜಯಮಹಾಂತ ಶಾಖಾಮಠದ ಸಿದ್ದಲಿಂಗ ಶ್ರೀಗಳು, ಶಿರೂರ ಬಂಜಾರ ಶಕ್ತಿ ಪೀಠದ ಕುಮಾರ ಮಹಾರಾಜರು, ಹೇಮಗಿರಿ ಗೋಸಾವಿ ಬಾವಾನವರು ಸಂಚರಿಸಿ ಧರ್ಮ ಜಾಗೃತಿ ಮೂಡಿಸಿದರು. ಮೆರವಣಿಗೆಯಲ್ಲಿ ರಾಜೂರ, ಬೆಣಸಮಟ್ಟಿ, ಲಕ್ಕಲಕಟ್ಟಿ, ದಿಂಡೂರ, ಭೈರಾಪುರ, ಕಣವಿ, ಅಮರಗಟ್ಟಿ, ನಾಗರಸಕೊಪ್ಪ ತಾಂಡಾದವರು ಮೆರವಣಿಗೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement