ಹೆಣ್ಣು ಸಮಾಜದ ಕಣ್ಣು: ಡಾ. ರಾಧಿಕಾ ಕುಲಕರ್ಣಿ
ಗದಗ: ಹೆಣ್ಣು ಈ ಸಮಾಜದ ಕಣ್ಣು ಎಂದು ಡಾ. ರಾಧಿಕಾ ಕುಲಕರ್ಣಿ ಹೇಳಿದರು.
ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆ ಶಿಕ್ಷಣ ಪಡೆದು ಸಕಾಲಕ್ಕೆ ಸರಿಯಾಗಿ ತನ್ನ ಆರೋಗ್ಯ ಕಾಯ್ದುಕೊಳ್ಳಬೇಕು. ಆರೋಗ್ಯ ಇದ್ದರೆ ಮಾತ್ರ ಮಹಿಳೆ ಒಳ್ಳೆಯ ಜೀವನ ನಡೆಸಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಉಮೇಶ ಬಾರಕೇರ ಮಾತನಾಡಿದರು. ಉಪನ್ಯಾಸಕಿ ಜಿ.ಎಫ್. ಕಾಯ್ಕದ, ಎಂ.ಸಿ. ಅಬ್ಬಿಗೇರಿ, ಬಿ ಆರ್. ಯಡವಟ್ಟಿ, ಉಪನ್ಯಾಸಕ ಡಾ. ಎಸ್.ಎಂ. ಮಡಿವಾಳರ, ಎಸ್.ಜಿ. ಉಳಿಗೇರ, ವಿ.ಪಿ. ಬಿಂಕದಕಟ್ಟಿ, ಎಸ್.ಎನ್. ಶ್ಯಾಗೋಟಿ, ವಿ.ಟಿ. ಮೂಲಿಮನಿ, ಜೆ.ಪಿ. ಗೊವಣ್ಣವರ, ಎಸ್.ಎಂ. ಕೊರ್ಲಹಳ್ಳಿ, ಎಸ್.ಬಿ. ಜೋಗಿನ, ಡಿ.ಎಂ. ಡಂಕೇದ, ಮಹಿಳಾ ಕಾರ್ಯದರ್ಶಿ ಮೇಘಾ ಇಂಗಳಳ್ಳಿ ಇದ್ದರು. ಸಾವಿತ್ರಿ ಗಾಳಿ ಪ್ರಾರ್ಥಿಸಿದರು. ಎಸ್.ಬಿ. ಕುಲಕರ್ಣಿ ಸ್ವಾಗತಿಸಿದರು. ಮಂಜುಳಾ ಯಲಿಗಾರ ನಿರೂಪಿಸಿದರು. ಸಾವಿತ್ರಿ ಗಾಳಿ ವಂದಿಸಿದರು.