ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿ: ಬೂದೀಶ್ವರ ಶ್ರೀ

Lingaraj Badiger
Updated On : 11 Mar 2014, 12:03 pm

ಕನ್ನಡಪ್ರಭ ವಾರ್ತೆ, ಗದಗ, ಮಾ. 10
ಮಕ್ಕಳಲ್ಲಿ ಶಕ್ತಿ ಮತ್ತು ಸಾಮರ್ಥ್ಯ ಕ್ರಿಯಾಶೀಲತೆಯಿಂದ ತುಂಬಬೇಕು ಶಿಸ್ತು, ಸೇವೆ, ಆತ್ಮವಿಶ್ವಾಸವುಳ್ಳ ಮಕ್ಕಳನ್ನು ದೇಶಕ್ಕೆ ಕೊಡುಗೆ ಕೊಡಬೇಕು ಎಂದು ಹೊಸಹಳ್ಳಿಯ ಬೂದೀಶ್ವರ ಶ್ರೀಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಹೊಸಹಳ್ಳಿಯ ಬೂದೀಶ್ವರ ವಿದ್ಯಾಪೀಠದಲ್ಲಿ ಗದಗ ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ 7 ದಿನದ ಮೂಲ ತರಬೇತಿಯ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ವಿ. ರಾಜೇಂದ್ರಪ್ರಸಾದ ಮಾತನಾಡಿ, ಪಾಲಕರ ಪರಿವರ್ತನೆಯಿಂದ ಸಮಾಜ ಪ್ರತಿಯಾಗಬೇಕಾಗಿದೆ. ಕಲಿಕಾ ವಾತಾವರಣ ನಿರ್ಮಾಣ ಮಾಡಿ ಸಮಯ, ಸತ್ಯ, ಸಂಯಮ ಸತ್ವತೆ ಕಲಿಸಬೇಕಾಗಿದೆ. ಕನಿಷ್ಠ ಮಗುವನ್ನು ಸತ್ಪ್ರಜೆಯಾಗಿಸುವುದೇ ಶಿಕ್ಷಣ ಎಂದರು.
ಕುರ್ತಕೋಟಿ ಗ್ರಾಪಂ ಅಧ್ಯಕ್ಷ ಅಪ್ಪಣ್ಣ ಇನಾಮತಿ, ಜಿಲ್ಲಾ ಉಪಯೋಜನಾಧಿಕಾರಿ ಎ.ಆರ್. ಅಕ್ಕಿ, ಬಿಇಒ ಎಸ್.ಆರ್. ಹೂಗಾರ, ಬಿ.ಎಸ್. ಲೂತಿಮಠ, ಡಿ.ಎಸ್. ತಳವಾರ, ಜಿ.ಎಚ್. ಪೂಜಾರ, ವಿ.ಬಿ. ಪೊಲೀಸ್‌ಪಾಟೀಲ, ಗುಜಮಾಗಡಿ, ಎಸ್.ಎಸ್. ಬೆಟಗೇರಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ವಿಜಯಕುಮಾರ, ಬಾಬುರಾವ್ ನಿಂಬೋಜಿ, ಸಿ.ಎಸ್. ತೋಟಪ್ಪನವರ, ಎನ್.ಎಚ್. ಜಾಧವ, ಎಚ್.ಎಸ್. ಬ್ಯಾಳಿ, ಜಿಲ್ಲಾ ಸಂಚಾಲಕ ಮಲ್ಲೇಶಪ್ಪ ಕೆ.ಟಿ., ಬಿ.ಡಿ. ಪವಾರ, ಎಲ್.ಪಿ. ಹಿರೇಮಠ, ಎ.ಎಸ್. ನರಗುಂದ, ಬಿ.ಟಿ. ಹೊಸಮನಿ ಮುಂತಾದವರು ಉಪಸ್ಥಿತರಿದ್ದರು. ಸಿಆರ್‌ಪಿ ಎ.ವಿ. ಪ್ರಭು ಸ್ವಾಗತಿಸಿ, ನಿರೂಪಿಸಿದರು. ಎಸ್.ಆರ್. ಬಂಡಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement