ಲಕ್ಷ್ಮೇಶ್ವರ ಪುರಸಭೆ ಮಾಜಿ ಅಧ್ಯಕ್ಷೆ ಪರಮ್ಮ ಬುರಡಿ ನಿಧನ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಮಾಜಿ ಅಧ್ಯಕ್ಷೆ ಪರಮ್ಮ ಕೊಟ್ರಪ್ಪ ಬುರಡಿ (95) ಸೋಮವಾರ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ.
ಸಂತಾಪ: ಪರಮ್ಮ ಬುರಡಿ ಅವರ ನಿಧನಕ್ಕೆ ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಎಸ್.ಎನ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಟಿಎಪಿಸಿಎಂಎಸ್ ಅಧ್ಯಕ್ಷ ಜಿ.ಬಿ. ಯತ್ನಳ್ಳಿ, ಚಂಬಣ್ಣ ಬಾಳಿಕಾಯಿ, ಪುರಸಭೆ ಮಾಜಿ ಅಧ್ಯಕ್ಷ ವಿ.ಜಿ. ಪಡಿಗೇರಿ, ಎನ್.ಜಿ. ಹೊಂಬಳ, ಶಂಕ್ರಪ್ಪ ಮ್ಯಾಗೇರಿ, ಶಂಕ್ರಣ್ಣ ಅಂದಲಗಿ, ಜಯಕ್ಕ ಕಳ್ಳಿ, ಪುರಸಭೆ ಅಧ್ಯಕ್ಷೆ ಗಂಗಮ್ಮ ಫಕ್ಕೀರಸ್ವಾಮಿಮಠ, ಉಪಾಧ್ಯಕ್ಷ ಎಂ.ಆರ್. ಪಾಟೀಲ, ಶಿಗ್ಲಿಯ ಈರಣ್ಣ ಪವಾಡದ, ಪರುತಪ್ಪ ಶಿರಹಟ್ಟಿ, ನಾರಾಯಣಪ್ಪ ಬೇವಿನಮರದ ಹಾಗೂ ಪುರಸಭೆ ಸದಸ್ಯರು, ಸಾರ್ವಜನಿಕರು ಸಂತಾಪ ವ್ಯಕ್ತಪಡಿಸಿದ್ದಾರೆ.
--