ಯುವಶಕ್ತಿಯಿಂದದೇಶದ ಅಭಿವೃದ್ಧಿ ಸಾಧ್ಯ
ಗದಗ: ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಪ್ರಾಮುಖ್ಯತೆ ಪಡೆದಿದೆ. ಯುವಕರು ಪ್ರಾಮಾಣಿಕವಾಗಿ ಮುಂದುವರಿದಲ್ಲಿ ಈ ದೇಶ ಅಭಿವೃದ್ಧಿ ಹೊಂದುವಲ್ಲಿ ಯಶಸ್ವಿಯಾಗುತ್ತದೆ ಎಂದು ಎಚ್‌ಸಿಇಎಸ್ ಪಪೂ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಡಿ.ಜೆ. ಜೋಗಣ್ಣವರ ಹೇಳಿದರು.
ಅವರು ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವತಿಯಿಂದ ತಾಲೂಕಿನ ನಾಗಾವಿ ಗ್ರಾಮದಲ್ಲಿ ಈಚೆಗೆ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಕೇದಾರಸ್ವಾಮಿ ಶಿರಹಟ್ಟಿಮಠ ಮಾತನಾಡಿ, ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಭಾಗವಹಿಸಿ ಮಹಾವಿದ್ಯಾಲಯದ ಕೀರ್ತಿ ಹೆಚ್ಚುವಲ್ಲಿ ಪ್ರಯತ್ನಿಸಬೇಕು ಎಂದರು.
ಎ.ಆರ್. ಮರಿಹನುಮರಡ್ಡಿ, ಜಿ.ಬಿ. ಕೃಷ್ಣರಡ್ಡಿ, ವಿ.ಪಿ. ಬಿಂಕದಕಟ್ಟಿ, ಬಿ.ಸಿ. ಜೋಗಿನ, ಎಸ್.ಎಸ್. ಗೋಲಪ್ಪನವರ, ಕೆ.ಎಂ. ಗೋವಿಂದರಡ್ಡಿ, ಎಸ್.ಎಚ್. ಮೊರಬರಡ್ಡಿ, ಎನ್‌ಎಸ್‌ಎಸ್ ಯೋಜನಾಧಿಕಾರಿ ಡಿ.ಎಂ. ಡಂಕೇದ, ಜೆ.ಎಫ್. ಕಾಯಕದ, ಎಂ.ಡಿ. ಮಾದರ, ಪ್ರವೀಣ ಶಿವಶಿಂಪಿಗೇರ, ಪ್ರಾ. ಉಮೇಶ ಬಾರಕೇರ ಮುಂತಾದವರು ಉಪಸ್ಥಿತರಿದ್ದರು. ಹೊಳಿಯಪ್ಪ ಹಿಂದಿನಮನಿ ಪ್ರಾರ್ಥಿಸಿದರು. ಬಸವರಾಜ ಹೂಗಾರ ನಿರೂಪಿಸಿದರು.