ವಿದ್ಯಾರ್ಥಿಗಳು ವೈಜ್ಞಾನಿಕತೆ ಬೆಳೆಸಿಕೊಳ್ಳಲಿ: ಗೊರಬಾಳ
ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ವೈಜ್ಞಾನಿಕತೆ, ತಾಂತ್ರಿಕ ಮನೋಭಾವ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಮಲಾ ಅಗಡಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ವಿ. ಗೋರಬಾಳ ಹೇಳಿದರು.
ಅವರು ಈಚೆಗೆ ಪಟ್ಟಣದ ಕಮಲಾ ಎಂ. ಅಗಡಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ವತಿಯಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಸಿಂಚನ ಪ್ರಬಂಧ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಘಟನೆ, ಸ್ನೇಹ ಮತ್ತು ಸಹೋದರತೆಯ ಮನೋಭಾವವನ್ನು ಬೆಳೆಸುವತ್ತ ರಾಷ್ಟ್ರೀಯ ಸ್ವಯಂ ಸಂಘದ ಯೋಜನೆಗಳು ಮಹತ್ವದ ಕಾರ್ಯ ಮಾಡುತ್ತದೆ ಎಂದರು.
ಆಡಳಿತ ವಿಭಾಗದ ಮುಖ್ಯಸ್ಥ ಡಾ. ಎನ್. ಹಯವದನ, ಎನ್‌ಎಸ್‌ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಉಪಸ್ಥಿತರಿದ್ದರು. ಒಟ್ಟು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಪ್ರಬಂಧಗಳನ್ನು ಮಂಡಿಸಿದರು. ಪ್ರಥಮ ಸ್ಥಾನವನ್ನು ಸಂಜಯ ಮತ್ತು ಶಾಂತವೀರ, ದ್ವಿತೀಯ ಸ್ಥಾನ ಪರಿಶ್ರವಿ ಹಿರೇಮಠ ಮತ್ತು ವಿದ್ಯಾಶ್ರೀ ಗಳಿಸಿದರೆ ತೃತೀಯ ಸ್ಥಾನವನ್ನು ಪೂಜಾ ಪಟ್ಟಣ ಮತ್ತು ಪ್ರಿಯಾಂಕಾ ಪಡೆದುಕೊಂಡರು. ಪ್ರವೀಣ ಹಡಪದ ಸ್ವಾಗತಿಸಿದರು. ಮೋನಿಕಾ ನಿರೂಪಿಸಿದರು, ಸೋಮು ಪಾಟೀಲ ವಂದಿಸಿದರು.