ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಂಸ್ಕಾರದ ಶಿಕ್ಷಣ ಅಗತ್ಯ

Rashmi Kasaragodu
Updated On : 12 Mar 2014, 3:01 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 11
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ದುಡಿಯುವ ಯಂತ್ರಗಳಾಗಿಸದೆ ದೇಶಕ್ಕಾಗಿ ಮಡಿಯುವ ಸಾಧಕರನ್ನಾಗಿ ರೂಪಿಸುವದರ ಜತೆಗೆ ಮಾನವೀಯ ಮೌಲ್ಯಗಳ ಶಿಕ್ಷಣದ ಸಂಸ್ಕಾರ ನೀಡುವುದು ಅಗತ್ಯವಾಗಿದೆ ಎಂದು ಯುವ ಸಾಧಕ ಪ್ರಶಸ್ತಿ ಪುರಸ್ಕೃತ ಗವಿಸಿದ್ದಯ್ಯ ಹಳ್ಳಿಕೇರಿಮಠ ಹೇಳಿದರು.
ಅವರು ಈಚೆಗೆ ಸ್ಥಳೀಯ ಸರ್ಕಾರಿ ಮಾದರಿಯ ಮೆಟ್ರಿಕ್ ಬಾಲಕಿಯರ ಪೂರ್ವ ವಸತಿ ನಿಲಯದ ಆವರಣದಲ್ಲಿ ಚಂದನ ನಗರ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯೋಗಾಸನ ಉಚಿತ ತರಬೇತಿಯ ಸಮಾರೋಪ      ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಶಿಕ್ಷಣದ ನೆಪವೊಡ್ಡಿ ಎಷ್ಟೋ ಕೊಚಿಂಗ್ ಸೆಂಟರ್‌ಗಳು ಹಣ ಗಳಿಸುವುದೆ ಮೂಲ ಜಾಯಮಾನವನ್ನಾಗಿ ಬೆಳೆಸಿಕೊಂಡು ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿ ನಿಲ್ಲುತ್ತಿವೆ. ಇನ್ನು ಕೆಲ ಸಂಸ್ಥೆಗಳು ಇದಕ್ಕೆ ಅಪವಾದ ಎಂಬಂತೆ ಹಣವನ್ನು ಕೇಂದ್ರೀಕರಿಸದೆ ಗುಣಾತ್ಮಕ ಶಿಕ್ಷಣ ನೀಡುತ್ತಿವೆ ಎಂದರು.
ಡಾ. ಪರ್ವತಗೌಡ್ರ ಹಿರೇಗೌಡ್ರ ಮಾತನಾಡಿ, ಶಿಕ್ಷಣದ ತರಬೇತಿ ಎಂದರೆ ಬರಿ ಉದ್ಯೋಗದ ದಾರಿ ತೊರಿಸುವುದಲ್ಲ. ಜೀವನದ ದಾರಿಯನ್ನು ತೋರಿಸುವುದು. ಈ ನಿಟ್ಟಿನಲ್ಲಿ ಮುಂಡರಗಿಯ ಚಂದನ ನಗರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಹಾಡು, ನೃತ್ಯ, ನಾಟಕಗಳ ಜತೆಗೆ ಉಚಿತ ವ್ಯಕ್ತಿತ್ವ ವಿಕಸನ ಹಾಗೂ ಯೋಗಾಸನ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಉಚಿತವಾಗಿ ಮೌಲ್ಯಯುತ ಶಿಕ್ಷಣ ನೀಡುತ್ತಿರುವುದು ಶ್ಲಾಘನಿಯ ಎಂದರು.
ದೇವಪ್ಪ ಇಟಗಿ ಹಾಗೂ ಮಂಜುನಾಥ ಇಟಗಿ ಪಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ತರಬೇತುದಾರ ನಿರ್ಮಲಾ, ಡಾ. ಪರ್ವತಗೌಡ್ರ ಹಿರೇಗೌಡ್ರ, ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರನ್ನು ಸನ್ಮಾನಿಸಲಾಯಿತು. ಪ್ರಾ. ವಿ.ಎಫ್. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಯಲ್ಲಪ್ಪ ಪೂಜಾರ ಸ್ವಾಗತಿಸಿದರು. ಯುವರಾಜ ರಾಮೇನಹಳ್ಳಿ ನಿರೂಪಿಸಿ, ವಂದಿಸಿದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement