ಹುಟ್ಟುಹಬ್ಬ ಆಚರಣೆ
ಗದಗ: ಯಂಗ್ ಇಂಡಿಯಾ ಪರಿವಾರ ಆಟೋ ಚಾಲಕರ ಹಾಗೂ ಮಾಲಕರ ಸಂಘದಿಂದ ಯಂಗ್ ಇಂಡಿ ಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವಿ.ಆರ್. ಗೋವಿಂದಗೌಡ್ರ ಹುಟ್ಟುಹಬ್ಬದ ನಿಮಿತ್ತ ಭಾನುವಾರ ನಗರದಲ್ಲಿ ನೀರಿನ ಅರವಟಗಿ ಉದ್ಘಾಟಿಸಿ, ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಬ್ರೆಡ್ ವಿತರಿಸಲಾಯಿತು.
27 ಚೀಲ ಗೋದಿ ಕಳವು
ನರಗುಂದ: ತಾಲೂಕಿನ ಗುರ್ಲಕಟ್ಟಿ ಗ್ರಾಮದ ರಘುನಾಥರಡ್ಡಿ ಮೇಟಿ ಅವರ ಮನೆಯ (ಕಟ್ಟಿ)ಚಾವಣಿಯಲ್ಲಿಟ್ಟಿದ್ದ 27 ಚೀಲ ಗೋದಿ ಯಾರೋ ದುರ್ಷರ್ಮಿಗಳು ಸೋಮವಾರ ರಾತ್ರಿ ಕಳವು ಮಾಡಿದ್ದಾರೆ. ರಘುನಾಥರಡ್ಡಿ ಅವರು ಜಮೀನಿನಲ್ಲಿ ಬೆಳೆದಂತಹ 27 ಚೀಲ ಗೋದಿಯನ್ನು ರಾಶಿಮಾಡಿಕೊಂಡು ಬಂದು (ಕಟ್ಟಿ)ಚಾವಣಿಯಲ್ಲಿಟ್ಟಿದ್ದರು. ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಎಸ್.ಆರ್. ಪಾಟೀಲ ಪ್ರಕರಣ ಕುರಿತು ತನಿಖೆ ಕೈಗೊಂಡಿದ್ದಾರೆ.
ಬಸವಣ್ಣೆಪ್ಪ ಅಣ್ಣಿಗೇರಿ
ಲಕ್ಷ್ಮೇಶ್ವರ: ಸಮೀಪದ ಬಾಲೆಹೊಸೂರು ಗ್ರಾಮದ ಬಸವಣ್ಣೆಪ್ಪ ಅಣ್ಣಿಗೇರಿ(75) ಶನಿವಾರ ನಿಧನರಾದರು. ಮೃತರಿಗೆ ಐವರು ಪುತ್ರರು, ಮೂವರು ಪುತ್ರಿಯರು, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಬಳಗ ಇದ್ದಾರೆ. ಬಾಲೆಹೊಸೂರಿನ ದಿಂಗಾಲೇಶ್ವರ ಮಠದ ಶ್ರೀಗಳು, ಗ್ರಾಮದ ಹಿರಿಯರು ಹಾಗೂ ಬಂಧು ಬಳಗ ಸಂತಾಪ ಸೂಚಿಸಿದ್ದಾರೆ.
ನಾಗಪ್ಪ ಬೂದಿಹಾಳ
ಗದಗ: ತಾಲೂಕಿನ ಕೋಟುಮಚಗಿ ಗ್ರಾಮದ ನಾಗಪ್ಪ ಬೂದಿಹಾಳ(75) ಸೋಮವಾರ ಸಂಜೆ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗ ಇದ್ದಾರೆ.