ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಿಳೆ ಅಬಲೆಯಲ್ಲ, ಸಬಲೆ

Lingaraj Badiger
Updated On : 13 Mar 2014, 11:28 am

ನರೇಗಲ್ಲ: ಮಹಿಳೆಯರಿಗೆ ಅನುಕೂಲವಾಗುವಂತಹ ಅನೇಕ ಕಾನೂನುಗಳಿದ್ದು, ಯಾವುದಕ್ಕೂ ಹಿಂಜರಿಕೆ ಪಡಬೇಕಾದ ಅಗತ್ಯತೆ ಇಲ್ಲವೆಂದು ರೋಣ ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ಡಿ. ಮಹಾವರಕರ ಹೇಳಿದರು.
ಅವರು ಸ್ಥಳೀಯ ಪಪಂ ಸಭಾ ಭವನದಲ್ಲಿ ರೋಣ ತಾಲೂಕು ಕಾನೂನು ಸೇವಾ ಪ್ರಾಧಿಕಾರ ಮತ್ತು ಗದಗ ಸುವರ್ಣ ಲೇಡೀಜ್ ಕ್ಲಬ್‌ಗಳ ಆಶ್ರಯದಲ್ಲಿ ಈಚೆಗೆ ನರೇಗಲ್ಲದ ಸುವರ್ಣ ಲೇಡೀಜ್ ಕ್ಲಬ್‌ನ ಸದಸ್ಯೆಯರು ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳೆಯ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯಗಳಿಗೆ ಕಡಿವಾಣ ಹಾಕಬೇಕೆಂದರೆ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಹೆಚ್ಚಾಗಬೇಕಿದೆ. ಇವುಗಳನ್ನು ಬೆಳೆಸುವ ಮಹತ್ತರವಾದ ಕಾರ್ಯ ನಡೆಯಬೇಕಾದುದು ಅವಶ್ಯಕವಾಗಿದೆ ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಸಿ. ನಂಜೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನ್ಯಾಯವಾದಿ ವಿ.ಎ. ದಿಂಡೂರ ಮಹಿಳಾ ಆಸ್ತಿ ಹಕ್ಕು ಮತ್ತು ವರದಕ್ಷಿಣೆ ನಿಷೇಧ ಕಾನೂನು ಮತ್ತು ಅಕ್ಕಮಹಾದೇವಿ ಪಾಟೀಲ ಮಹಿಳೆ ಮತ್ತು ಕಾನೂನು ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಸುವರ್ಣ ಲೇಡೀಜ್ ಕ್ಲಬ್‌ನ ಗದಗ ಜಿಲ್ಲಾ ಘಟಕದ ಅಧ್ಯಕ್ಷೆ ಶೈಲಜಾ ಕವಲೂರ, ಸುವರ್ಣ ವಾಹಿನಿಯ ಕಾರ್ಯಕ್ರಮ ನಿರ್ವಾಹಕ ಕೆ.ಬಿ. ವೈದ್ಯ, ಸುವರ್ಣ ಲೇಡೀಸ್ ಕ್ಲಬ್‌ನ ಹುಬ್ಬಳ್ಳಿ-ಧಾರವಾಡ ವಲಯದ ಕೋ-ಆರ್ಡಿನೇಟರ್ ಉಮಾ ಮುಕುಂದ, ರೋಣ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಂ. ಡಂಬಳ, ಸರ್ಕಾರಿ ಸಹಾಯಕ ಅಭಿಯೋಜಕ ಎನ್.ಆರ್. ಆಡಿ ಮುಂತಾದವರು ಮಾತನಾಡಿದರು. ನರೇಗಲ್ಲ ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ, ಹುಬ್ಬಳ್ಳಿ ಸುವರ್ಣ ಲೇಡೀಸ್ ಕ್ಲಬ್‌ನ ಕೋಶಾಧ್ಯಕ್ಷೆ ಕವಿತಾ ಸಾವಳಗಿ, ಕ್ಲಬ್‌ನ ಜಿಲ್ಲಾ ಕಾರ್ಯದರ್ಶಿ ವಿಜಯಾ ವೈದ್ಯ ಮುಂತಾದವರು ಇದ್ದರು.
ಉಮಾ ಗ್ರಾಮಪುರೋಹಿತ ಸ್ವಾಗತಿಸಿದರು. ನರೇಗಲ್ಲ ಘಟಕದ ನಾಯಕಿ ರಾಜಶ್ರೀ ಕುಲಕರ್ಣಿ ನಿರೂಪಿಸಿದರು. ಸುರೇಖಾ ಕುರಿ ಪರಿಚಯಿಸಿದರು. ಗಾಯತ್ರಿ ಬಾಗಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement