ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಬೆಂಬಲಿಸಿ

Lingaraj Badiger
Updated On : 14 Mar 2014, 11:29 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮಾ. 13
ಸ್ವಾರ್ಥಕ್ಕಾಗಿ ಒಗ್ಗಟ್ಟಿನ ಮಂತ್ರ ಜಪಿಸಿ ಜನತೆಯ ಮತಗಿಟ್ಟಿಸಿ ಜನರ ಸಂಕಷ್ಟಗಳಿಗೆ ಸ್ಪಂದಿಸದ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ. ಸಾಮರಸ್ಯ, ಸಹಬಾಳ್ವೆ ಜತೆ ಸರ್ವ ಸಮುದಾಯಗಳ ಅಭಿವೃದ್ಧಿಗಾಗಿ ಶ್ರಮಿಸುವ ಕಾಂಗ್ರೆಸ್‌ನ್ನು ಬೆಂಬಲಿಸಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಿ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಸ್ಥಳೀಯ ಅಂಬೇಡ್ಕರ ವೃತ್ತದ ಬಳಿ ಬುಧವಾರ ಸಂಜೆ ಜರುಗಿದ ಭಾರತ ನಿರ್ಮಾಣ ಯಾತ್ರಾ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ 10 ವರ್ಷದ ಅಧಿಕಾರವಧಿಯಲ್ಲಿ ಹಲವಾರು ಕ್ರಾಂತಿಕಾರಕ ಮಸೂದೆ ಜಾರಿಗೊಳಿಸಿ ಜನಪರ ಸರ್ಕಾರವೆಂಬುದನ್ನು ಸಾಬೀತುಪಡಿಸಿದೆ. ಅದರಂತೆ ಸಿದ್ದರಾಮಯ್ಯ ನಾಯಕತ್ವದ ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ಜನತೆಗೆ ಕೊಟ್ಟ ಭರವಸೆಯಂತೆ ಅನ್ನಭಾಗ್ಯ, ಕ್ಷೀರಭಾಗ್ಯ, ಸಣ್ಣ ರೈತರ ರು. 25 ಸಾವಿರವರೆಗಿನ ಸಾಲ, ನೇಕಾರ ಹಾಗೂ ಹಿಂದುಳಿದ ಸಮುದಾಯಗಳ ಸಾಲ ಮನ್ನಾ ಮಾಡಿದೆ. ರು. 2 ಹಾಲು ರಿಯಾಯ್ತಿ, ರು. 4 ಸಹಾಯಧನ, ಬಡತನ ರೇಖೆಗಿಂತ ಕೆಳಗಿರುವ ಜನ ವಸತಿಯ ಭಾಗ್ಯ, ಭಾಗ್ಯಜ್ಯೋತಿ ಯೋಜನೆ, ಬಾಕಿಹಣ ಮನ್ನಾ ಹಾಗೂ ಪಿಂಚಣಿ ಅದಾಲತ್‌ನಂತಹ ಜನಪರ ಯೋಜನೆ ಕಾರ್ಯಗತಗೊಳಿಸುವ ಮೂಲಕ ರಾಜ್ಯದ ಜನರ ಪ್ರಶಂಸೆಗೆ ಪಾತ್ರವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ ಎಂದರು.
ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಅದ್ಯಕ್ಷತೆ ವಹಿಸಿ ಮಾತನಾಡಿದರು. ಹಾವೇರಿ ಲೋಕಸಭಾ ಉಪಾಧ್ಯಕ್ಷ ಮಿಥುನ್ ಪಾಟೀಲ, ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ವಿ.ಆರ್. ಗುಡಿಸಾಗರ, ಪುರಸಭೆ ಸದಸ್ಯೆ ಸುಜಾತಾ ಚುಂಚಾ, ಶಾರದಾ ರಾಠೋಡ್, ಮಕ್ತುಂಬಿ ಹಣಗಿ, ಶಾರಮ್ಮ ತಳವಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಅಶೋಕ ಬಾಗಮಾರ, ಚಂಬಣ್ಣಾ ಚವಡಿ, ಸುಭಾನಸಾಬ ಆರಗಿದ್ದಿ, ರವಿ ಗಡೇದವರ, ಮಾರುತಿ ಕಲ್ಲೋಡ್ಡರ, ಶಶಿಧರ ಹೂಗಾರ, ಮುರ್ತುಜಾ ಡಾಲಾಯತ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement