ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸತತ ಪರಿಶ್ರಮದಿಂದ ಯಶಸ್ಸು ಸಾಧ್ಯ

Lingaraj Badiger
Updated On : 14 Mar 2014, 11:29 am

ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ನಿರಾಶಾವಾದಿಗಳಾಗದೆ ಆಶಾವಾದಿಗಳಾಗಿರಬೇಕು. ನಮ್ಮಿಂದ ಕಠಿಣ ಸಾಧನೆ ಮಾಡಲು ಸಾಧ್ಯವಿಲ್ಲ ಎನ್ನುವ ಭಾವನೆ ದೂರಮಾಡಿದಾಗ ಯಶಸ್ಸು ನಮ್ಮ ಕಾಲಬಳಿ ಬಂದಿರುತ್ತದೆ ಎಂದು ದೂರ ಸಂಪರ್ಕ ಇಲಾಖೆ ನಿವೃತ್ತ ಅಧಿಕಾರಿ ಶೇಖಣ್ಣ ಸೊರಟೂರ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಸಮೀಪದ ಗೊಜನೂರು ಸರ್ಕಾರಿ ಪ್ರೌಢಶಾಲೆಯ ವಾರ್ಷಿಕೋತ್ಸವ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಪ್ರೌಢಶಾಲೆಯ ಅಷ್ಟಾದಶದರ್ಪಣ ಎನ್ನುವ ಗ್ರಂಥ ಬಿಡುಗಡೆ ಮಾಡಿದ ಗದಗ ಜಿಲ್ಲಾ ಕೈಗಾರಿಕಾ ಯೋಜನಾಧಿಕಾರಿ ಸಿ.ಪಿ. ಮಾಡಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಿ ಯಶಸ್ಸಿನ ಮಾರ್ಗದತ್ತ ಸಾಗುವಲ್ಲಿ ತಮ್ಮ ಗುರಿ ಕೇಂದ್ರೀಕರಿಸಿರಬೇಕು. ಯಾವುದೇ ಫಲವು ತಾನಾಗಿಯೇ ನಮ್ಮತ್ತ ಸಾಗಿ ಬರುವುದಿಲ್ಲ. ಕಠಿಣ ಪರಿಶ್ರಮದಿಂದ ನಿಮ್ಮ ಮುಂದಿನ ಜೀವನವು ಹೂವಿನ ಹಾಸಿಗೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಶಿರಹಟ್ಟಿ ತಾಲೂಕು ತೋಟಗಾರಿಕಾ ಇಲಾಖೆಯ ನಿರ್ದೇಶಕ ಶಂಕರ ಕುಂಬಾರ ಮಾತನಾಡಿ, ಗೊಜನೂರಿನ ಸರ್ಕಾರಿ ಪ್ರೌಢಶಾಲೆಯು ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ಶಾಲಾ ಮೈದಾನದಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುವ ಉದ್ಯಾನವನ ನಿರ್ಮಿಸುತ್ತಿದ್ದು, ಇದು ರಾಜ್ಯದಲ್ಲಿ ಮಾದರಿ ಶಾಲೆಯಾಗಿ ಮಾರ್ಪಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಹಾನಗಲ್ಲಿನ ಕುಮಾರೇಶ್ವರ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಎಸ್.ಟಿ. ಶಾಂತಪುರಮಠ, ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರವಿ ಬೆಂಚಳ್ಳಿ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಲ್.ಎಫ್. ಹೊಸಮನಿ, ಮಲ್ಲಿಕಾರ್ಜುನಗೌಡ ಪಾಟೀಲ ಹಾಗೂ ಶಿಕ್ಷಕ ಎನ್.ಎಂ. ಜನಿವಾರದ ಪ್ರಾಸ್ತಾವಿಕ ಮಾತನಾಡಿದರು.
ಸಿ.ಎಫ್. ಜೋಗಿನ, ಎಸ್.ಎಸ್. ಯಾಳಗಿ ಪಾರಿತೋಷಕ ವಿತರಿಸಿದರು. ಇದೇ ಸಂದರ್ಭ ಕಳೆದ ವರ್ಷ 10ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು, ಗ್ರಾಮದ ನಿವೃತ್ತ ಅಧಿಕಾರಿಗಳನ್ನು, ವರ್ಗಾವಣೆಗೊಂಡ ಶಾಲಾ ಶಿಕ್ಷಕಿ ಎಸ್.ಎಂ. ಪಾಟೀಲ ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಎಚ್.ಎಫ್. ಬೆಟಗೇರಿ ಸ್ವಾಗತಿಸಿದರು. ಶಿಕ್ಷಕಿ ಎ.ಡಿ. ಕುಲಕರ್ಣಿ ಹಾಗೂ ದೈಹಿಕ ನಿರ್ದೇಶಕ ಎಂ.ಡಿ. ತಳ್ಳಳ್ಳಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement