ತೋಂಟದಾರ್ಯ ಜಾತ್ರಾ ಸಮಿತಿ ಸಭೆ
ಗದಗ: ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ-2014ರ ಸಭೆ ಗುರುವಾರ ಸಂಜೆ ಶ್ರೀಮಠದ ಆವರಣದಲ್ಲಿ ಜಾತ್ರಾ ಸಮಿತಿ ಜರುಗಿತು.
ವಿವಿಧ ಉಪಸಮಿತಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ ನಡೆಯಿತು. ಸಮನ್ವಯ ಸಮಿತಿ ಅಧ್ಯಕ್ಷ ಡಾ. ಎನ್.ಬಿ. ಪಾಟೀಲ, ಉಪಾಧ್ಯಕ್ಷರಾಗಿ ಎಸ್.ಎಂ. ಮಾರನಬಸರಿ, ಕಾರ್ಯಕ್ರಮ ಸಮಿತಿಗೆ ಅಧ್ಯಕ್ಷರಾಗಿ ಎಸ್.ಎಂ. ವಾಲಿ, ಉಪಾಧ್ಯಕ್ಷರಾಗಿ ಪ್ರಕಾಶ ಅಸುಂಡಿ, ಕಾರ್ಯದರ್ಶಿಯಾಗಿ ಬಾಹುಬಲಿ ಜೈನರ್, ಮೆರವಣಿಗೆ ಸಮಿತಿಗೆ ಅಧ್ಯಕ್ಷರಾಗಿ ಸಿದ್ದಣ್ಣ ಮುನವಳ್ಳಿ, ಉಪಾಧ್ಯಕ್ಷರಾಗಿ ಸುರೇಶ ಅಂಗಡಿ, ಕಾರ್ಯದರ್ಶಿಯಾಗಿ ಮಲ್ಲಣ್ಣ ಚನ್ನಳ್ಳಿ, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಎಂ.ಎಸ್. ಪಾಟೀಲ, ಉಪಾಧ್ಯಕ್ಷರಾಗಿ ಪ್ರಭು ಹಿರೇಮಠ, ಕಾರ್ಯದರ್ಶಿಯಾಗಿ ಶಿವಕುಮಾರ ತೆಗ್ಗಿನಮಠ, ಪ್ರಚಾರ ಸಮಿತಿ ಅಧ್ಯಕ್ಷರಾಗಿ ವೀರಣ್ಣ ಮುದಗಲ್, ಉಪಾಧ್ಯಕ್ಷರಾಗಿ ಹುಚ್ಚಣ್ಣ ಶಾಪೂರ, ಕಾರ್ಯದರ್ಶಿಯಾಗಿ ಕೊಟ್ರೇಶ ಮೆಣಸಿನಕಾಯಿ, ಹಣಕಾಸು ಸಮಿತಿ ಅಧ್ಯಕ್ಷರಾಗಿ ಅಮರೇಶ ಅಂಗಡಿ, ಉಪಾಧ್ಯಕ್ಷರಾಗಿ ಕೆ.ಎಸ್. ಚೆಟ್ಟಿ, ಕಾರ್ಯದರ್ಶಿಯಾಗಿ ವಿಜಯ ಬಂಗಾರಶೆಟ್ರ, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರಾಗಿ ಎಚ್.ವಿ. ಶಾನಭೋಗರ, ಉಪಾಧ್ಯಕ್ಷರಾಗಿ ಜಿ.ಪಿ. ಕಟ್ಟಿಮನಿ, ಕಾರ್ಯದರ್ಶಿಯಾಗಿ ಎಲ್.ಜಿ. ಹಾವಣಗಿ, ಅಲಂಕಾರ ಸಮಿತಿಗೆ ಅಧ್ಯಕ್ಷರಾಗಿ ಸಿದ್ದಣ್ಣ ಗೌರಿಪುರ, ಉಪಾಧ್ಯಕ್ಷರಾಗಿ ಪಾಪಣ್ಣ ಮುಳಗುಂದ, ಕಾರ್ಯದರ್ಶಿಯಾಗಿ ಚನ್ನವೀರ ಹುಣಸಿಕಟ್ಟಿ, ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷರಾಗಿ ವಿಜಯ ಗೊಡಚಿ, ಉಪಾಧ್ಯಕ್ಷರಾಗಿ ಚೇತನ ಅಂಗಡಿ, ಕಾರ್ಯದರ್ಶಿಯಾಗಿ ಮಹೇಶ ಗಾಣಿಗೇರ, ಆರೋಗ್ಯ ಸಮಿತಿ ಅಧ್ಯಕ್ಷರಾಗಿ ಡಾ. ಉಮೇಶ ಪುರದ, ಉಪಾಧ್ಯಕ್ಷರಾಗಿ ಡಾ. ಬಿ.ಆರ್. ರಾಜಾಪುರ, ಕಾರ್ಯದರ್ಶಿಯಾಗಿ ಡಾ. ಪೊಲೀಸ್‌ಪಾಟೀಲ, ವೇದಿಕೆ ಪೆಂಡಾಲ್ ಸಮಿತಿ ಅಧ್ಯಕ್ಷರಾಗಿ ಚಂದ್ರಶೇಖರಪ್ಪ ಅರಳಿ, ಉಪಾಧ್ಯಕ್ಷರಾಗಿ ರಬ್ಬಾನಿ ಹುಲಕೋಟಿ, ಕಾರ್ಯದರ್ಶಿಯಾಗಿ ನೂರ ನ್ಯಾಶನಲ್ ಡೆಕೊರೇಷನ್, ತೇರು ವ್ಯವಸ್ಥೆ ಸಮಿತಿ ಅಧ್ಯಕ್ಷರಾಗಿ ಸಿದ್ದಲಿಂಗೇಶ ಹಿರೇಮಠ, ಉಪಾಧ್ಯಕ್ಷರಾಗಿ ಈರಣ್ಣ ಗೋಟಡಕಿ, ಕಾರ್ಯದರ್ಶಿಯಾಗಿ ಸಿದ್ದಣ್ಣ ಕಾಡಪ್ಪನವರ, ಆಮಂತ್ರಣ ಪತ್ರಿಕೆ ಮುದ್ರಣ ಹಾಗೂ ವಿತರಣಾ ಸಮಿತಿ ಅಧ್ಯಕ್ಷರಾಗಿ ಶೇಖಣ್ಣ ಕಳಸಾಪುರಶೆಟ್ರ, ಉಪಾಧ್ಯಕ್ಷರಾಗಿ ಚಂದ್ರು ಇಟಗಿ, ಕಾರ್ಯದರ್ಶಿಯಾಗಿ ಚಂದ್ರಶೇಖರ ನಿಲೂಗಲ್ ಆಯ್ಕೆಗೊಂಡಿದ್ದಾರೆ ಎಂದು ಜ. ತೋಂಟದಾರ್ಯ ಜಾತ್ರಾ ಸಮಿತಿ ಕಾರ್ಯದರ್ಶಿ ಎಂ.ಸಿ. ಐಲಿ ತಿಳಿಸಿದರು. ಜಾತ್ರಾ ಸಮಿತಿ ಸಭೆಯಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷ ವಿರುಪಣ್ಣ ಬಳ್ಳೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ. ತೋಂಟದ ಸಿದ್ಧಲಿಂಗ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ಸಲವೂ ಜಾತ್ರಾ ಮಹೋತ್ಸವವನ್ನು ಅದ್ಧೂರಿ ಅರ್ಥಪೂರ್ಣತೆಯೊಂದಿಗೆ ಆಚರಿಸಲಾಗುವುದು. ಸರ್ವ ಉಪಸಮಿತಿಗಳ ಪದಾಧಿಕಾರಿಗಳು ಸದಸ್ಯರು ಹಾಗೂ ಸದ್ಬಕ್ತ ಜನತೆ ಸಹಕರಿಸಲು ಕೋರಿದರು. ರಾಜು ಕುರಡಗಿ ಸೇರಿದಂತೆ ಮುಂತಾದವರು ಸಭೆಯಲ್ಲಿ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. ಉಪಾಧ್ಯಕ್ಷ ಕೆ.ಎಚ್. ಬೇಲೂರು ಇತರೆ ಉಪಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಜಾತ್ರಾ ಸಮಿತಿ ಕಾರ್ಯದರ್ಶಿ ಎಂ.ಸಿ. ಐಲಿ ನಿರೂಪಿಸಿದರು. ಚಂದ್ರಶೇಖರ ಉಗಲಾಟದ ವಂದಿಸಿದರು.