ಪದಾಧಿಕಾರಿಗಳ ಆಯ್ಕೆ
ಮುಂಡರಗಿ: ವೀರಶೈವ ಪಂಚಮಸಾಲಿ ಶಹರ ಯುವ ಘಟಕದ ಪದಾಧಿಕಾರಿಗಳನ್ನು ಜಗದ್ಗುರು ತೋಂಟದಾರ್ಯ ಮಠದಲ್ಲಿ ಸಭೆ ಸೇರಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ನಾಗರಾಜ ಮುರಡಿ, ಉಪಾಧ್ಯಕ್ಷರಾಗಿ ಅಶೋಕ ಬಾಳಿಕಾಯಿ, ಮುತ್ತು ಅಳವಂಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಜಂತ್ಲಿ, ಸಂಘಟನೆ ಕಾರ್ಯದರ್ಶಿಯಾಗಿ ಅನ್ನದಾನೀಶ ಗಟ್ಟಿ, ಕಾರ್ಯದರ್ಶಿಯಾಗಿ ನಿಂಗನಗೌಡ ಪೊಲೀಸ್ಪಾಟೀಲ, ಸಿದ್ದು ಗುದ್ನೆಪ್ಪನವರ, ವೀರೇಶ ಹಡಗಲಿ ಆಯ್ಕೆಯಾಗಿದ್ದಾರೆ. ಸಮಾಜದ ತಾಲೂಕಾಧ್ಯಕ್ಷ ಕೊಟ್ರಗೌಡ ಪಾಟೀಲ, ಮಂಜುನಾಥ ಮುಧೋಳ, ಕುಮಾರ ಬನ್ನಿಕೊಪ್ಪ, ಮಂಜುನಾಥ ಇಟಗಿ, ದೇವಪ್ಪ ಇಟಗಿ, ಗಿರೀಶ ಪಾಟೀಲ, ಮಂಜುನಾಥ ಗೋಡಿ, ಸಿದ್ದು ದೇಸಾಯಿ, ಶಿವು ಹೊಂಬಳಗಟ್ಟಿ, ಜಗದೀಶ ಉಳ್ಳಾಗಡ್ಡಿ, ಸಂತೋಷಕುಮಾರ ಮುರಡಿ ಅಂದಪ್ಪ ಉಳ್ಳಾಗಡ್ಡಿ ಇದ್ದರು.