ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ ವಿಧಾನಸಭೆ ಕ್ಷೇತ್ರದ ಕೆಲವು ಮತಗಟ್ಟೆ ಸ್ಥಳಾಂತರ

Lingaraj Badiger
Updated On : 19 Mar 2014, 12:22 pm

ಗದಗ: ಹಾವೇರಿ ಲೋಕಸಭೆ ಕ್ಷೇತ್ರದ ಗದಗ ವಿಧಾನಸಭೆ ಕ್ಷೇತ್ರದ 19 ಮತಗಟ್ಟೆಗಳ ಸ್ಥಳಬದಲಾವಣೆ ಮಾಡಲಾಗಿದೆ. ಹೊಸ ಮತಗಟ್ಟೆ ಸಂಖ್ಯೆ, ಸ್ಥಳ ಜತೆಗೆ ಆವರಣದಲ್ಲಿ ಮೊದಲಿದ್ದ ಹಳೆಯ ಮತಗಟ್ಟೆ ಸ್ಥಳ ಹಾಗೂ ಸಂಖ್ಯೆ   ನೀಡಲಾಗಿದೆ.
ಗದಗ: ಹೊಸ ಮತಗಟ್ಟೆ 11 ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಗಂಡು ಮಕ್ಕಳ ಶಾಲೆ (ಡಿಸಿ ಮಿಲ್ ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಳೆಯ ಮತಗಟ್ಟೆ ಸಂಖ್ಯೆ-11), ಮತಗಟ್ಟೆ ಸಂಖ್ಯೆ 61 ದುರ್ಗಾದೇವಿ ಗುಡಿ ಹತ್ತಿರದ ಕನ್ನಡ ಗಂಡು ಮಕ್ಕಳ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆ (ಹೊಂಬಳ ರೋಡಿನ ಸಿಎಂಸಿ ಧರ್ಮಶಾಲೆ ಹಳೆಯ ಮತಗಟ್ಟೆ ಸಂಖ್ಯೆ 60).
ಬೆಟಗೇರಿ: ಹೊಸ ಮತಗಟ್ಟೆ 22 ಬೆಟಗೇರಿಯ ಕನ್ನಡ ಕಿರಿಯ ಪ್ರಾಥಮಿಕ ಗಂಡು ಮಕ್ಕಳ ಸರ್ಕಾರಿ ಶಾಲೆ 27 ಹಾಗೂ 28 ಕಣಗಿನಹಾಳ ರಸ್ತೆಯ ಶರಣ ಬಸವೇಶ್ವರ ಪ್ರಾಥಮಿಕ ಶಾಲೆಯ ಉತ್ತರ ಮತ್ತು ದಕ್ಷಿಣ ಭಾಗ (ಶರಣ ಬಸವೇಶ್ವರ ಹೈಸ್ಕೂಲ್ ಮತಗಟ್ಟೆ ಸಂಖ್ಯೆ 26 ಹಾಗೂ 27), ಮತಗಟ್ಟೆ 38 ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಸರ್ಕಾರಿ ಶಾಲೆ ರಾಜೀವಪ್ಪ ಶಾಲೆಯ ಹಳೆಯ ಕಟ್ಟಡ (ಡಾ. ರಾಜೇಂದ್ರ ಪ್ರಸಾದ ರೋಡಿನ ಹಿರಿಯ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 37), ಮತಗಟ್ಟೆ 45 ಹಾಗೂ ಪೊಲೀಸ್ ವಸತಿ ಗೃಹ ಆವರಣದ ಪೂರ್ವ ಭಾಗಕ್ಕಿರುವ ಹಳೇ ಪೊಲೀಸ್ ಠಾಣೆ (ಬಳ್ಳಾರಿ ಗೇಟ್ ಹತ್ತಿರದ ಗಂಡುಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ. 44 ಹಾಗೂ 45), ಮತಗಟ್ಟೆ 47 ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಸರ್ಕಾರಿ (ರಾಜೀವಪ್ಪ) ಶಾಲೆ (ಬಳ್ಳಾರಿ ಗೇಟ್ ಹತ್ತಿರದ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಮತಗಟ್ಟೆ ಸಂಖ್ಯೆ 46) ಮತಗಟ್ಟೆ 35 ಹಿರಿಯ ಪ್ರಾಥಮಿಕ ಮರಾಠಿ ಸರ್ಕಾರಿ ಶಾಲೆ ಕೆ.ಸಿ. ರಾಣಿ ರಸ್ತೆ (ಹಿ.ಪ್ರಾ. ಹೆಣ್ಣು ಮಕ್ಕಳ ಸರ್ಕಾರಿ ಶಾಲೆ ಕೆ.ಸಿ. ರಾಣಿ ರಸ್ತೆ ಮತಗಟ್ಟೆ ಸಂಖ್ಯೆ 52) ಹಾಗೂ ಹೊಸ ಮತಗಟ್ಟೆ ಸಂಖ್ಯೆ 95 ಜ. ಪಂಚಾಚಾರ್ಯ ಬಿ.ಇಡಿ. ಕಾಲೇಜು ಪಿಎನ್‌ಟಿ ಕ್ವಾರ್ಟರ್ಸ್ (ಪಿಎನ್‌ಟಿ) ಟಿ ಕ್ವಾರ್ಟರ್ಸ್ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಸರ್ಕಾರಿ ಶಾಲೆ ಹಳೆಯ ಮತಗಟ್ಟೆ ಸಂಖ್ಯೆ 95).
ಮುಳಗುಂದ: ಹೊಸ ಮತಗಟ್ಟೆ ಸಂಖ್ಯೆ 179 ಮುಳಗುಂದ ಗ್ರಾಮ ಚಾವಡಿ ಕಟ್ಟಡ (ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಸರ್ಕಾರಿ ಶಾಲೆ, ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಮುಳಗುಂದ ಹಳೆಯ ಮತಗಟ್ಟೆ ಸಂಖ್ಯೆ 174), ಮತಗಟ್ಟೆ ಸಂಖ್ಯೆ 180 ಡಾ. ಅಂಬೇಡ್ಕರ್ ನಗರದ ಸರ್ಕಾರಿ ಗ್ರಂಥಾಲಯ (ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಮುಳಗುಂದ ಹಳೆಯ ಮತಗಟ್ಟೆ ಸಂಖ್ಯೆ 175) ಮತಗಟ್ಟೆ ಸಂಖ್ಯೆ 181 ಹಾಗೂ 192 ಕನ್ನಡ ಗಂಡುಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ಉತ್ತರ ಹಾಗೂ ದಕ್ಷಿಣ ಭಾಗ (ಪಟ್ಟಣ ಪಂಚಾಯಿತಿ ಕಾರ್ಯಾಲಯ ಹಾಗೂ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ 176 ಹಾಗೂ 177), ಮತಗಟ್ಟೆ ಸಂಖ್ಯೆ 184 ಮುಳಗುಂದ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಮತಗಟ್ಟೆ ಸಂಖ್ಯೆ 185, ಹಿರಿಯ ಪ್ರಾಥಮಿಕ ಕೇಂದ್ರೀಯ ಸರ್ಕಾರಿ ಶಾಲೆ (ಗಂಡು ಮಕ್ಕಳ ಪ್ರಾಥಮಿಕ ಸರ್ಕಾರಿ ಕೇಂದ್ರೀಯ ಉರ್ದು ಶಾಲೆ ಮತಗಟ್ಟೆ ಸಂ. 179 ಹಾಗೂ 180 ಹಾಗೂ ಹೊಸ ಮತಗಟ್ಟೆ ಸಂಖ್ಯೆ 187 ಹಾಗೂ 188 ಡಿಪಿಇಪಿ ಶಾಲೆಯ ಉತ್ತರ ಹಾಗೂ ದಕ್ಷಿಣ ಭಾಗ (ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಕೇಂದ್ರೀಯ ಸರ್ಕಾರಿ ಶಾಲೆ ಹೊಸಕಟ್ಟಡ 182 ಮತ್ತು ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆ ಸಂ. 2ರಲ್ಲಿದ್ದ ಹಳೆಯ ಮತಗಟ್ಟೆ ಸಂ. 183) ಸಂಬಂಧಿತ ಮತಗಟ್ಟೆಗಳ ಮತದಾರರು ಈ ಬದಲಾವಣೆಯನ್ನು ಗಮನಿಸಲು ಹಾವೇರಿ ಲೋಕಸಭಾ ಕ್ಷೇತ್ರದ ಗದಗ ವಿಧಾನಸಭೆ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement