ಗದಗ: ಹೊಸ ಮತಗಟ್ಟೆಗಳ ಸ್ಥಾಪನೆ
ಗದಗ: ಗದಗ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ನಿರ್ದೇಶನದನ್ವಯ 5 ಹೆಚ್ಚುವರಿ ಹೊಸ ಮತಗಟ್ಟೆ ಸ್ಥಾಪಿಸಲಾಗಿದೆ.
ಬೆಟಗೇರಿಯ ಕಣವಿ ಪ್ಲಾಟ್ನಲ್ಲಿ ಕನ್ನಡ ಹೆಣ್ಣು ಮಕ್ಕಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 3 ಹಾಗೂ 4 ರ ಪೈಕಿ ಮತಗಟ್ಟೆ ಸಂಖ್ಯೆ 24 ಸ್ಥಾಪಿಸಲಾಗಿದ್ದು ಬೆಟಗೇರಿ ಕಣವಿ ಪ್ಲಾಟ್, ಮಂಜುನಾಥ ನಗರ ಗುಡಿಸಲು ಸಾಲುಗಳು ವಾರ್ಡ್ 3ರ ಭಾಗ ಸಂಖ್ಯೆ 3 ಮನೆ ಸಂಖ್ಯೆ 221ರಿಂದ 318 ಇವು ಈ ಮತಗಟ್ಟೆಯ ವ್ಯಾಪ್ತಿಯಲ್ಲಿವೆ. ಗದಗ ಗಂಗಿಮಡಿಯ ಕನ್ನಡ ಗಂಡು ಮಕ್ಕಳ ಸರ್ಕಾರಿ ಶಾಲೆಯಲ್ಲಿ 71 ಸಂಖ್ಯೆ ಮತಗಟ್ಟೆ ಹೊಸದಾಗಿದ್ದು ಇದರಲ್ಲಿ ವಾರ್ಡ್ ಸಂಖ್ಯೆ 22ರ ಭಾಗ 4 ಇವರ ರಿ.ಸ.ನಂ. 299ನ ಎ ದಿಂದ ಡಿ ಹಾಗೂ 400, ಗಂಗಿಮಡಿ ಆಶ್ರಯ ಕಾಲನಿ, ಅಮರೇಶ್ವರ ನಗರ, ಮಾನ್ವಿನಾಲಾ ಬಲಭಾಗಗಳು ಸೇರಿವೆ. ಬೆಟಗೇರಿಯ ರಾಜೀವಗಾಂಧಿ ನಗರದ ಗಂಡು ಮಕ್ಕಳ ಕಿರಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 3 ಹಾಗೂ 8ರಲ್ಲಿ ಸ್ಥಾಪಿತ 97 ಸಂಖ್ಯೆಯ ಮತಗಟ್ಟೆ ವ್ಯಾಪ್ತಿಯಲ್ಲಿ ವಾರ್ಡ್ ಸಂಖ್ಯೆ 29ರ ಭಾಗ 5 ಇದರ ಮನೆ ಸಂಖ್ಯೆ 402 ರಿಂದ 412 ರಾಜೀವಗಾಂಧಿ ನಗರದ ಪಶ್ಚಿಮ ಭಾಗದ ಮನೆ ಸಂಖ್ಯೆ 412-696ದಿಂದ ಎ ಪ್ರದೇಶಗಳು ಸೇರಿವೆ.
ಬೆಟಗೇರಿಯ ಪಿ ಆಂಡ್ ಟಿ ಕ್ವಾರ್ಟರ್ಸ್, ಕನ್ನಡ ಗಂಡು ಮಕ್ಕಳ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 16ರಲ್ಲಿ ಸ್ಥಾಪಿತ 101 ಸಂಖ್ಯೆಯ ಮತಗಟ್ಟೆ ವ್ಯಾಪ್ತಿಯಲ್ಲಿ ಬೆಟಗೇರಿಯ ವಿವೇಕಾನಂದ ನಗರದ ವಾರ್ಡ್ ಸಂಖ್ಯೆ 11ರ ಭಾಗ 4 ಇದರ ಮನೆ ಸಂಖ್ಯೆ 246, 426 ರಿಂದ 729 ಪ್ರದೇಶಗಳು ಸೇರಿವೆ. ನಗರದ ಮುಳಗುಂದ ರೋಡಿನ ಸರ್ಕಾರಿ ಪಪೂ ಕಾಲೇಜಿನಲ್ಲಿ 112 ಸಂಖ್ಯೆಯ ಮತಗಟ್ಟೆ ವ್ಯಾಪ್ತಿಯಲ್ಲಿ ರಾಧಾಕೃಷ್ಣ ನಗರದ ವಾರ್ಡ್ ಸಂಖ್ಯೆ 32ರ ಭಾಗ ಸಂಖ್ಯೆ 5 ಮನೆ ಸಂಖ್ಯೆ 249 ಮತ್ತು 259 ಪ್ರದೇಶಗಳು ಸೇರಿವೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಗದಗ ಉಪವಿಭಾಗಾಧಿಕಾರಿ ಐ.ಜಿ. ಗದ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.